ಗೋಶಾಲಾ ನೃತ್ಯೋತ್ಸವದಲ್ಲಿ ನೃತ್ಯ ಕಾರ್ಯಾಗಾರ

nruthya
ಪೆರಿಯ ಗೋಕುಲಂನ ವೈಶಾಕ ನಟನಂನಲ್ಲಿ ಅಪರ್ಣಾ ಶರ್ಮಾ ಅವರಿಂದ ನೃತ್ಯ ಪ್ರದರ್ಶನ.
Published on

ಮುಳ್ಳೇರಿಯ: ಪೆರಿಯ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ವೈಶಾಕ ನಟನಂ ರಾಷ್ಟ್ರೀಯ ನೃತ್ಯೋತ್ಸವದ ಸಂದರ್ಭ ಚೆನ್ನೈನ ಖ್ಯಾತ ನೃತ್ಯಗಾರ್ತಿ ಅಪರ್ಣಾ ಶರ್ಮಾ ಮೂರು ದಿನದ ಭರತನಾಟ್ಯ ಕಾರ್ಯಾಗಾರ ನಡೆಸಿಕೊಡುತ್ತಿದ್ದಾರೆ.

ಗುರುವಾಯೂರ್‌ನ ಗೀತಾ ಶರ್ಮಾ ಅವರ ತಿರುವಾತಿರ ಅಧ್ಯಯನ ಶಿಬಿರವನ್ನೂ ಆರಂಭಿಸಲಾಯಿತು. ಎರಡನೇ ದಿನ ಬುಧವಾರ ಕರ್ನಾಟಕದ ಅರ್ಪಿತಾ ಹೆಗ್ಡೆ ಮತ್ತು ಅದಿತಿ ಅಖಿಲ್ ಅವರಿಂದ ಭರತನಾಟ್ಯ, ನಯನಾ ನಾರಾಯಣ್, ಅಶ್ವತಿ ಕೃಷ್ಣ ಮತ್ತು ಕಲಾಮಂಡಲಂ ಕೃಷ್ಣಪ್ರಿಯ ಅವರಿಂದ ಭರತನಾಟ್ಯ ಮತ್ತು ಯೋಗಕ್ಷೇಮ ಉಪಸಭಾ ಕಾಞಂಗಾಡ್ ಮತ್ತು ಅಲ್ಕೋಡು ಗ್ರಾಮಸ್ಥರಿಂದ ತಿರುವಾತಿರ ನಡೆಯಿತು. ಗುರುವಾರ ಶ್ರೀಲತಾ, ಅದಿತಿ ಲಕ್ಷ್ಮಿ ಭಟ್, ಮಹತಿ ಸಾಗರ, ಬೆಂಗಳೂರು ‘ನಟನಾತರಂಗಿಣಿ’ಯ ವಿದ್ಯಾರ್ಥಿಗಳು ಮತ್ತು ನಾಟ್ಯ ನಿಲಯ ಮಂಜೇಶ್ವರ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net