‘ಗೋರ್‌ಮಾಟಿ’ ನಾಟಕ ಪ್ರದರ್ಶನ 30ಕ್ಕೆ

Drama-games
Published on

ಮೈಸೂರು: ರಂಗಾಯಣ ಅಂಗಳದ ಭೂಮಿಗೀತ ರಂಗವೇದಿಕೆಯಲ್ಲಿ ಜೂ.30ರಂದು ಸಂಜೆ 6.30ಕ್ಕೆ ಬಂಜಾರ ಸಮುದಾಯದ ಅಸ್ಮಿತೆಯ ಕಾವ್ಯಕಥನ ‘ಗೋರ್‌ಮಾಟಿ’ ನಾಟಕ ಪ್ರದರ್ಶನವಾಗಲಿದೆ.
ರಂಗಕರ್ಮಿ ಸಿ.ಬಸವಲಿಂಗಯ್ಯ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ರಂಗಾಯಣ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ.
ಗೋರ್‌ಮಾಟಿ ಎಂದರೆ ನಮ್ಮ ಜನ ಎಂದರ್ಥ. ಇದು ಜಾತಿ ಸೂಚಕವಲ್ಲ. ಬದಲಿಗೆ ಸಂಸ್ಕೃತಿ ಸೂಚಕ. ನಮ್ಮ ನೆಲಮೂಲದ ಸಂಸ್ಕೃತಿ ಬಗ್ಗೆ ತಿಳಿಸುವ ಉದ್ದೇಶದಿಂದ ಈ ನಾಟಕ ನಿರ್ದೇಶಿಸಲಾಗಿದೆ. ಬಂಜಾರ ಜನಾಂಗದ ಸಂತೋಷ, ಸುಖ-ದುಃಖಗಳು ನಾಟಕದಲ್ಲಿವೆ. ಚರಿತ್ರೆಯಲ್ಲಿ ಇವರ ಬದುಕು ಹೇಗೆ ದುರಂತಮಯವಾಗಿದೆ ಎಂಬುದನ್ನು ನಾಟಕ ರೂಪದಲ್ಲಿ ಕಟ್ಟಿಕೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net