

ರಂಗಾಯಣ ಅಂಗಳದ ಭೂಮಿಗೀತ ರಂಗವೇದಿಕೆಯಲ್ಲಿ ಜು.21ರಂದು ಸಂಜೆ 6.30ಕ್ಕೆ ಬಂಜಾರ ಸಮುದಾಯದ ಅಸ್ಮಿತೆಯ ಕಾವ್ಯಕಥನ ‘ಗೋರ್‌ಮಾಟಿ’ ನಾಟಕ ಪ್ರದರ್ಶನಗೊಳ್ಳಲಿದೆ.
ರಂಗಕರ್ಮಿ ಸಿ.ಬಸವಲಿಂಗಯ್ಯ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ರಂಗಾಯಣ ಕಲಾವಿದರು ಪ್ರಸ್ತುತಪಡಿಸಿದ್ದಾರೆ. ಗೋರ್‌ಮಾಟಿ ಎಂದರೆ ನಮ್ಮ ಜನ ಎಂದರ್ಥ. ಇದು ಜಾತಿ ಸೂಚಕವಲ್ಲ. ಬದಲಿಗೆ ಸಂಸ್ಕೃತಿ ಸೂಚಕ. ಬಂಜಾರ ಜನಾಂಗದ ಸಂತೋಷ, ಸುಖ-ದುಃಖಗಳು ನಾಟಕದಲ್ಲಿವೆ. ಚರಿತ್ರೆಯಲ್ಲಿ ಇವರ ಬದುಕು ಹೇಗೆ ದುರಂತಮಯವಾಗಿದೆ ಎಂಬುದನ್ನು ನಾಟಕ ರೂಪದಲ್ಲಿ ಕಟ್ಟಿಕೊಡಲಾಗಿದೆ.