ಅರಣ್ಯಾಧಿಕಾರಿಗಳಿಂದ ಶೋಧ, ವಡ್ಡರ್ಸೆಯಲ್ಲಿ ಗೊರಿಲ್ಲ ಪ್ರತ್ಯಕ್ಷ ಪ್ರಕರಣ

gorilla
Published on

ಕೋಟ: ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತಾಡಿ ಭಾಗದಲ್ಲಿ ಗೊರಿಲ್ಲ ಕಾಣಿಸಿಕೊಂಡಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಬ್ರಹ್ಮಾವರ ಅರಣ್ಯ ಇಲಾಖಾ ಅಧಿಕಾರಿ ಹರೀಶ್ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಲಾಯಿತು.

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹೆಜ್ಜೆ ಗುರುತು ಜಾಡು ಹಿಡಿದು ಎಂಟು ಎಕರೆ ವಿಸ್ತೀರ್ಣದ ಕಾಡು ಪ್ರದೇಶದಲ್ಲಿ ಪ್ರತ್ಯಕ್ಷದರ್ಶಿ ಗುರುರಾಜ್ ಹಾಗೂ ಪ್ರಜ್ವಲ್ ಮತ್ತು ಸ್ಥಳೀಯರ ಸಹಕಾರದಿಂದ ಶೋಧ ನಡೆಸಿದ್ದು, ಎಲ್ಲೂ ಸುಳಿವು ಲಭ್ಯವಾಗಿಲ್ಲ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ಕ್ಲಿಪರ್ಡ್ ಲೋಬೊ, ಉಪ ವಲಯ ಅರಣ್ಯ ಅಧಿಕಾರಿ ಹರೀಶ್ ಕೆ., ಅರಣ್ಯ ರಕ್ಷಕ ಅಕ್ಷಿತಾ ಕೆ.ಶೆಟ್ಟಿ, ಶಿವಪ್ಪ ನಾಯ್ಕ, ವಾಹನ ಚಾಲಕ ಜಾಯ್ ಉಪಸ್ಥಿತರಿದ್ದರು.

ಈ ಭಾಗದಲ್ಲಿ ಯಾರು ಕೂಡ ಒಬ್ಬಂಟಿಯಾಗಿ ತಿರುಗಾಡುವುದು, ಮಕ್ಕಳನ್ನು ತಿರುಗಾಡಲು ಬಿಡುವುದು ಮಾಡಬಾರದು. ಏನಾದರೂ ಸುಳಿವು ಸಿಕ್ಕಿದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಅರಣ್ಯ ಅಧಿಕಾರಿ ಹರೀಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net