ವಾಲಿಬಾಲ್‌ನಲ್ಲಿ ಪವರ್ ಬಾಯ್ಸಗೆ ಜಯ, ಗೊರೇಬಾಳದಲ್ಲಿ ಗ್ರಾಮೀಣ ಕ್ರೀಡಾಕೂಟ

011222 Gorebala Village Games
ಗೊರೇಬಾಳದಲ್ಲಿ ಬುಧವಾರ ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತ ಮಹಿಳಾ ಖೋ ಖೋ ತಂಡಕ್ಕೆ ಬಹುಮಾನ ವಿತರಿಸಲಾಯಿತು.
Published on

ಗೊರೇಬಾಳ: ಗ್ರಾಮದಲ್ಲಿ ಗ್ರಾಪಂನಿಂದ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತರಿಗೆ ಬುಧವಾರ ಬಹುಮಾನ ವಿತರಿಸಲಾಯಿತು. ಕಬಡ್ಡಿಯಲ್ಲಿ ಉದಯ್ ಸಿಂಗ್ ನೇತೃತ್ವದ ತಂಡ ಪ್ರಥಮ ಸ್ಥಾನ ಪಡೆಯಿತು. ಹುಲಗಪ್ಪ, ರಾಜಶೇಖರ, ರವಿಕುಮಾರ್, ಸುರೇಶ್, ಮಲ್ಲೇಶಪ್ಪ, ಶಶಿಕುಮಾರ್, ಗಣೇಶ, ದೇವರಾಜ ಹಾಗೂ ಮಲ್ಲೇಶ ತಂಡದಲ್ಲಿದ್ದರು. ವಾಲಿಬಾಲ್ ಸ್ಪರ್ಧೆಯಲ್ಲಿ ಕೆ.ಹಂಚಿನಾಳ ಕ್ಯಾಂಪ್‌ನ ಪವರ್ ಬಾಯ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು. ತಂಡದಲ್ಲಿ ಲಕ್ಷ್ಮೀಕಾಂತ್, ವಿರೂಪಾಕ್ಷಪ್ಪ, ರಘು, ಬಿ.ಸುರೇಶ್, ಯಶವಂತ, ಶಿವರಾಜ ಹಾಲ್ವಿ, ಗಣೇಶ, ಸಿಂಹಾದ್ರಿ, ನಾಗೇಂದ್ರ ಇದ್ದರು.

ಖೋ ಖೋ ಸ್ಪರ್ಧೆಯಲ್ಲಿ ಗ್ರಾಮದ ಭಗತ್ ಸಿಂಗ್ ತಂಡ ಪ್ರಥಮ ಸ್ಥಾನ ಪಡೆಯಿತು. ಚನ್ನಬಸವ, ಅಮರೇಶ, ಚನ್ನಪ್ಪ, ರಮೇಶ, ಯಮನೂರಪ್ಪ ಬೇರ್ಗಿ, ಅಮರೇಶ್, ಯಮನೂರಪ್ಪ ಮ್ಯಾಗಡೆ, ಮೇಘರಾಜ್, ಅಭಿಷೇಕ, ಮಾಳಿಂಗ, ಪಂಪಾಪತಿ, ಶಶಿಕುಮಾರ್ ಇದ್ದರು.

ಮಹಿಳೆಯರ ಕಬಡ್ಡಿ ಪಂದ್ಯದಲ್ಲಿ ಗೊರೇಬಾಳದ ಅಕ್ಕನ ಬಳಗ ತಂಡ ಪ್ರಥಮ ಸ್ಥಾನ ಪಡೆಯಿತು. ಶಿವಗಂಗಾ, ಗಂಗಮ್ಮ ಹೆಬ್ಬಾಳ, ರಾಜೇಶ್ವರಿ, ಸಣ್ಣ ಹುಲಿಗೆಮ್ಮ, ಲಕ್ಷ್ಮೀ, ಅನ್ನಪೂರ್ಣ, ಅಂಬಮ್ಮ, ದೇವಮ್ಮ ತಂಡದಲ್ಲಿದ್ದರು. ಖೋ ಖೋ ಸ್ಪರ್ಧೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ತಂಡ ಪ್ರಥಮ ಸ್ಥಾನ ಪಡೆಯಿತು. ಸರಸ್ವತಿ, ರತ್ನಮ್ಮ, ಪುಷ್ಪಾವತಿ, ವಿಜಯಲಕ್ಷ್ಮೀ, ಬಸಮ್ಮ, ಮಾರುತೆಮ್ಮ, ಯಂಕಮ್ಮ, ಹಂಪಮ್ಮ, ಪಲ್ಲವಿ, ದೇವಿ ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net