

ಗೊರೇಬಾಳ: ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಮನೆ ಮನೆಗಳಿಗೆ ತೆರಳಿ ಮತಯಾಚಿಸಿದರು.
ಜಿಪಂ ಮಾಜಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಮಾತನಾಡಿ, ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದರೆ ಗೆಲುವು ಸಾಧ್ಯ. ಪಕ್ಷ ಘೋಷಿಸುವ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಪ್ರತಿಯೊಬ್ಬರೂ ಶ್ರಮಿಸಬೇಕು. ಸರ್ಕಾರ ತಂದಿರುವ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು ಎಂದರು.
ಮುಖಂಡರಾದ ರಾಜೇಶ ಹಿರೇಮಠ, ಎನ್.ಶಿವನಗೌಡ ಗೊರೇಬಾಳ, ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ರೈತ ಮೋರ್ಚಾ ಅಧ್ಯಕ್ಷ ಬಸನಗೌಡ ನಾಗರಬೆಂಚಿ, ಪ್ರಮುಖರಾದ ಕೆ.ಕರಿಯಪ್ಪ, ಎನ್.ಶಿವನಗೌಡ ಗೊರೇಬಾಳ, ಮಧ್ವರಾಜ್ ಆಚಾರ, ಶರಣು, ಸಿದ್ದು ಹೂಗಾರ, ಟಿ.ಸುಬ್ಬರಾವ್, ಸೋಮನಗೌಡ ಇಂಗಳಗಿ, ಯಲ್ಲಪ್ಪ ಹಿರೇಕುರಬರ, ಬಸವರಾಜ ಮ್ಯಾಗಡೆ, ಬೀರಪ್ಪ ಕುರಬರ ಇದ್ದರು.