ಶರಣಬಸವೇಶ್ವರ ಭಕ್ತರ ಪಾಲಿನ ಆರಾಧ್ಯದೈವ

Untitled design (50)
ಗೊರೇಬಾಳದಲ್ಲಿ 45ನೇ ವರ್ಷದ ಶರಣಬಸವೇಶ್ವರರ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಹಿರೇಮಠ ಇಳಕಲ್ಲನ ಅನ್ನದಾನ ಶಾಸ್ತ್ರಿಗಳು ಮಾತನಾಡಿದರು. ಪ್ರಮುಖರಾದ ಮಹಾಂತ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಅಡವಿ ಅಮರೇಶ್ವರ ಶಾಂತಮಲ್ಲ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಒಳಬಳ್ಳಾರಿಯ ಬಸವಲಿಂಗ ಸ್ವಾಮೀಜಿ ಇತರರಿದ್ದರು.
Published on

ಗೊರೇಬಾಳ: ಮೂರನೇ ಭೀಮಕವಿ ವಿರಚಿತ ಬಸವ ಪುರಾಣ ಸಾವಿರಾರು ಭಕ್ತರ ಮನದಲ್ಲಿ ನೆಲೆಯೂರಿ ನಿಂತಿದೆ ಎಂದು ಮಹಾಂತೇಶ್ವರ ಮಠ ಮುದುಗಲ್ಲಿನ ಮಹಾಂತ ಸ್ವಾಮೀಜಿ ಹೇಳಿದರು.

ಗ್ರಾಮದ 45ನೇ ವರ್ಷದ ಶರಣಬಸವೇಶ್ವರರ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಗುರುವಾರ ಮಾತನಾಡಿದರು. ಬಸವಣ್ಣರ ಪುರಾಣ ಕೇಳುವುದರಿಂದ ಸಕಲ ಇಷ್ಟಾರ್ಥ ಸಿದ್ಧಿಸುದೆಂದು ಪ್ರತೀತಿ ಇದೆ. ಪ್ರವಚನದಲ್ಲಿ ಊರಿನ ಮಹಿಳೆಯರು ವಚನಾಸಕ್ತರಾಗಿರುವುದನ್ನು ಕಂಡೆನು. ಒಳಬಳ್ಳಾರಿಯ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಕೃಪಾಕಟಾಕ್ಷದಿಂದ ನೆಲೆಯೂರಿದ ಶರಣಬಸವೇಶ್ವರ ಭಕ್ತರ ಪಾಲಿನ ಆರಾಧ್ಯದೈವ ಎಂದರು.

ಮೂರು ಸಾವಿರಮಠ ಹುಬ್ಬಳ್ಳಿ-ಹಾನಗಲ್ ನ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಒಳಬಳ್ಳಾರಿಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಗಳ ಸಂಕಲ್ಪದಿಂದ ಎಲ್ಲವೂ ಸಾಧ್ಯ. ಅದಕ್ಕೆ ಭಕ್ತಸಮೂಹವೇ ಸಾಕ್ಷಿ. ಜಗದೊಡೆಯ ಜಗಜ್ಯೋತಿ ಬಸವೇಶ್ವರ ಆದರ್ಶಗಳನ್ನು ಪಾಲಿಸುವ ಮೂಲಕ ದೇವಸ್ಥಾನ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

ದೇವಮಂದಿರ ಮಹಾಮಠ ಮಣಕವಾಡಿಯ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ರೈತರು ರಾಸಾಯನಿಕ ಗೊಬ್ಬರಗಳಿಗೆ ಕಡಿವಾಣ ಹಾಕಲಿ. ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ಸಿಗುವಂತಾಗಬೇಕು. ರೈತರ ಮನಪರಿವರ್ತನೆ ಮಾಡುವ ಕಾರ್ಯವಾಗಬೇಕಾಗಿದೆ ಎಂದರು.
ಹೊಸಪೇಟೆಯ ಜಗದ್ಗುರು ಕೊಟ್ಟೂರುಸ್ವಾಮಿ ಮಠದ ಬಸವಲಿಂಗ ಸ್ವಾಮೀಜಿ, ಸುವರ್ಣ ಗಿರಿ ವಿರಕ್ತಮಠದ ಅಡವಿ ಅಮರೇಶ್ವರ ಶಾಂತಮಲ್ಲ ಸ್ವಾಮೀಜಿ ಸಭೆಯ ನೇತೃತ್ವವಹಿಸಿದ್ದರು.

ಘನಮಠೇಶ್ವರ ಮಠ ಸಂತೆಕೆಲೂರಿನ ಗುರುಬಸವ ಸ್ವಾಮೀಜಿ ಅದ್ಯಕ್ಷತೆ ವಹಿಸಿದ್ದರು. ವಿರಕ್ತ ಮಠದ ಜೇರಟಗಿ ಸುವರ್ಣಗಿರಿ ವಿರಕ್ತ ಮಠ ಒಳಬಳ್ಳಾರಿಯ ಬಸವಲಿಂಗ ಸ್ವಾಮೀಜಿ, ಸುವರ್ಣ ಗಿರಿ ವಿರಕ್ತ ಮಠಾಡವಿ ಅಮರೇಶ್ವರದ ತೋಂಟದಾರ್ಯ ಸ್ವಾಮೀಜಿ, ಸಿಂಧನೂರು ಕಲ್ಮಠದ ಸಿದ್ದಲಿಂಗ ಶಿವಾಚಾರ್ಯರು, ಮರಡಿಮಠ ಗುಳೇದಗುಡ್ಡ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ , ಸೋಮನಾಳದ ಮಲ್ಲಿಕಾರ್ಜುನಯ್ಯ ತಾತ, ಜಗದ್ಗುರು ಕೊಟ್ಟೂರು ಸ್ವಾಮಿ ಶಾಖಾಮಠ ಶ್ರೀಧರಗಡ್ಡೆಯ ಮರಿಕೊಟ್ಟೂರು ದೇಶಿಕರು, ಜಗದ್ಗುರು ಕೊಟ್ಟೂರು ಸ್ವಾಮಿ ಶಾಖಾ ಮಠದ ಸೋಮುಸಮುದ್ರದ ಸಿದ್ದಲಿಂಗ ದೇಶಿಕರು, ವ್ಯಾಕರನಾಳದ ವಿಶ್ವೇಶ್ವರ ದೇವರು, ಕಮರಿಮಠ ಹಳಿಂಗಳಿಯ ಶಿವಾನಂದ ದೇವರು ಇದ್ದರು.

ಬೆಂಗಳೂರು ಪ್ರಾಧ್ಯಾಪಕ ರಾಜಶೇಖರ ಮಠಪತಿ ಉಪನ್ಯಾಸ ನೀಡಿದರು. ಕವಿತಾ ಮಠಪತಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸಿದ್ದೇಶ್ವರ ದೇಶೀಕರು ಬೂದುಗುಂಪ, ಮರೇಗೌಡ ಪಾಟೀಲ್ ಬಳ್ಳಾರಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net