ಸ್ವಾವಲಂಬನೆಗಾಗಿ ಹೊಲಿಗೆಯಂತ್ರ ವಿತರಣೆ

16082022 gorebal news
Published on

ಗೊರೇಬಾಳ: ಸ್ವಾತಂತ್ರೃದ ಅಮೃತ ಮಹೋತ್ಸವ ಅಂಗವಾಗಿ ಗ್ರಾಪಂ ಕಚೇರಿಯಲ್ಲಿ ಸೋಮವಾರ 22 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಮತ್ತು ಕಿವಿಯ ಯಂತ್ರ ಗಳನ್ನು ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ಬಸವರಾಜ ವಿತರಿಸಿದರು.

ಅಂಗವಿಕಲರ ಸ್ವಾವಲಂಬನೆ ಹಾಗೂ ಜೀವನಾಧಾರಕ್ಕೆ ಸಹಕಾರಿಯಾಗಲೆಂದು ಪಂಚಾಯಿತಿಯ ಶೇ 5 ಅನುದಾನದಲ್ಲಿ ಹೊಲಿಗೆ ಯಂತ್ರ ನೀಡಲಾಗಿದ್ದು, ಸದುಪಯೋಗ ಪಡಿಸಿಕೊಳ್ಳಲು ಹೇಳಿದರು.

ಉಪಾಧ್ಯಕ್ಷೆ ಈರಮ್ಮ ಶರಣಬಸವ ಮಾತನಾಡಿ, ಇನ್ನೂ ಅನೇಕರಿಗೆ ಹೊಲಿಗೆ ಯಂತ್ರ ಹಾಗೂ ಇತರ ಸೌಲಭ್ಯ ಒದಗಿಸುವ ಕೆಲಸವನ್ನು ಗ್ರಾಪಂ ಮಾಡಲಿದೆ. ಇದರಿಂದಾಗಿ ಯೋಜನೆಗೆ ಅರ್ಹರು ನಿರಾಸೆ ಪಡುವ ಅಗತ್ಯವಿಲ್ಲ ಎಂದು ಹೇಳಿದರು. ಕಾರ್ಯದರ್ಶಿ ಪಾಲಾಕ್ಷಪ್ಪ, ಬಿಜೆಪಿ ರೈತ ಮೋರ್ಚಾ ಸ್ಥಳೀಯ ಘಟಕದ ಅಧ್ಯಕ್ಷ ಬಸನಗೌಡ ನಾಗರಬೆಂಚಿ, ವಿಆರ್‌ಡಬ್ಲುೃ ಬಸವರಾಜ ಜವಾಲಿ, ಗ್ರಾಪಂ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೊಗ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net