

ಗೊರೇಬಾಳ: ಸಮೀಪದ ಸೋಮಲಾಪುರದ ಸಿದ್ಧಪರ್ವತ ಅಂಬಾಮಠದಲ್ಲಿ ಸೋಮವಾರ ಸದ್ಗುರು ಸಿದ್ಧಾರೂಢರ ಹಾಗೂ ಸದ್ಗುರು ಬಸವಲಿಂಗ ಸ್ವಾಮೀಜಿಗಳ ಅಮೃತ ಶಿಲಾಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.
ಸಜ್ಜಲಗುಡ್ಡ ಶರಣಬಸಯ್ಯ ಸ್ವಾಮಿ ಶಾಸ್ತ್ರಿಗಳ ನೇತೃತ್ವ ವಹಿಸಿದ್ದರು. ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ, ಸಚ್ಚಿದಾನಂದ ಆಶ್ರಮ ಅಂಬಾಮಠದ ಸದ್ಗುರು ಸಂಗಮೇಶ್ವರ ಶರಣರು ಅಧ್ಯಕ್ಷತೆ ವಹಿಸಿದ್ದರು. ಜಮಖಂಡಿಯ ರುದ್ರಾವಧೂತ ಮಠದ ಸಹಜಾನಂದ ಅವಧೂತ ವೇದಾಂತಾಚಾರ್ಯರ ನೇತೃತ್ವದಲ್ಲಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಹೋಮ-ರುದ್ರಾಭಿಷೇಕ ಜರುಗಿತು. ಅಂಕಲಿಮಠದ ವೀರಭದ್ರ ಸ್ವಾಮೀಜಿ, ಬೇಡರ ಕಾರ್ಲಕುಂಟಿ ಕಾಲಜ್ಞಾನಮಠದ ಶಿವಕುಮಾರ ಸ್ವಾಮೀಜಿ, ಪ್ರಮುಖರಾದ ಸದಾಶಿವರೆಡ್ಡಿ ದೇಸಾಯಿ, ಹನುಮಂತ್ರಾಯಗೌಡ, ರಾಜು, ಮಹಾಬಳೇಶಗೌಡ, ರಾಮಚಂದ್ರಪ್ಪ, ಗಿರಿಮಲ್ಲಪ್ಪ ಬಮ್ಮನಾಳ, ಲಕ್ಷ್ಮಣ ಅಂಕನಾಳ ಲಕ್ಕಪ್ಪ ತಾತ ಗುರುಮನೆ ಇತರರಿದ್ದರು.