ಸುರಕ್ಷತೆ ದೃಷ್ಟಿಯಿಂದ ಸ್ಟೀಲ್ ಕ್ಯಾನ್ ಬಳಸಿ

27-03-ಗೊರೇಬಾಳ-01
ಬೂದಿವಾಳ ಕ್ಯಾಂಪ್ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರೈತರಿಗೆ ರಾ.ಬ.ಕೊ.ವಿ ಒಕ್ಕೂಟದ ಉಪ ವ್ಯವಸ್ಥಾಪಕ ಹನುಮಂತ ರಡ್ಡಿ ಸ್ಟೀಲ್ ಕ್ಯಾನ್‌ಗಳನ್ನು ನೀಡಿದರು. ಸಂಘದ ಅಧ್ಯಕ್ಷ ಎ.ಶಿವರಾಮ್, ಕಾರ್ಯನಿರ್ವಾಹಕ ಅಧಿಕಾರಿ ಸುಬ್ಬಾರಾವ್ ಇತರರಿದ್ದರು.
Published on

ಗೊರೇಬಾಳ: ರೈತರು ಸ್ಟೀಲ್ ಕ್ಯಾನ್‌ಗಳಲ್ಲಿ ಹಾಲು ಸಂಗ್ರಹಿಸಿ ಕೇಂದ್ರಗಳಿಗೆ ಸರಬರಾಜು ಮಾಡಬೇಕೆಂದು ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಹನುಮಂತ ರಡ್ಡಿ ಹೇಳಿದರು.

ಬೂದಿವಾಳ ಕ್ಯಾಂಪ್ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರೈತರಿಗೆ ಸ್ಟೀಲ್ ಕ್ಯಾನ್‌ಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು. ಈ ಮೊದಲು ರೈತರು ಪ್ಲಾೃಸ್ಟಿಕ್ ಕ್ಯಾನ್‌ಗಳನ್ನು ಬಳಕೆ ಮಾಡುತ್ತಿದ್ದರು. ಇದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಹಾಲಿನ ಗುಣಮಟ್ಟವೂ ಹಾಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾೃಸ್ಟಿಕ್ ಕ್ಯಾನ್ ಬಳಕೆ ತಡೆಯುವ ಉದ್ದೇಶದಿಂದ ಹಾಲು ಉತ್ಪಾದಕ ರೈತರಿಗೆ ಉಚಿತವಾಗಿ ಸ್ಟೀಲ್ ಕ್ಯಾನ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net