ಅಂಗನವಾಡಿ ಕೇಂದ್ರ, ಶಾಲೆ ಆವರಣದಲ್ಲಿ ನೀರು

02082022 gorebal rain
Published on

ಗೊರೇಬಾಳ: ಮಳೆಯಿಂದಾಗಿ ಶಾಂತಿನಗರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹಾಗೂ ಒಂದು ಮತ್ತು ಮೂರನೆಯ ಅಂಗನವಾಡಿ ಕೇಂದ್ರಗಳಲ್ಲಿ ನೀರು ನಿಂತಿತ್ತು. ನೀರಿನಲ್ಲಿ ದವಸ-ಧಾನ್ಯಗಳು ನೆನೆದವು.

ಶಾಲೆಯ ಆವರಣದಲ್ಲಿನ ನೀರು ಹೊರಹೋಗಲು ಪೈಪ್ ಅಳವಡಿಸಲಾಗಿದೆ. ಆದರೆ, ಪೈಪ್‌ನಲ್ಲಿ ಕಸ ಇದ್ದ ಹಿನ್ನೆಲೆಯಲ್ಲಿ ಸಮಸ್ಯೆಯಾಯಾಯಿತು. ಕಸ ತೆಗೆಯಲು ಗ್ರಾಮಸ್ಥರು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಆವರಣದ ಒಂದೆಡೆ ತಗ್ಗು ಇದ್ದು, ಸಮತಟ್ಟು ಮಾಡಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net