ನಾಟಿಗೆ ಬೀಜೋಪಚಾರ ಮಾಡಿದ ಸಸಿ ಬಳಸಿ

231222 Gorebala Farmers Day
ಗೊರೇಬಾಳದಲ್ಲಿ ಶುಕ್ರವಾರ ಆಯೋಜಿಸಿದ್ದ ರೈತರ ದಿನದ ಕಾರ್ಯಕ್ರಮದಲ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ವಿಜಯಕುಮಾರ ಮೇಟಿ, ಪ್ರಮುಖರಾದ ಶರಣೇಗೌಡ ಪೊಲೀಸ್ ಪಾಟೀಲ್, ಎಚ್.ಮಲ್ಲನಗೌಡ, ಅರ್.ಬಸವನಗೌಡ, ಎಂ.ಶರಣೇಗೌಡ ಇದ್ದರು.
Published on

ಗೊರೇಬಾಳ: ಗ್ರಾಮದ ಶರಣಬಸವೇಶ್ವರರ ದೇವಾಲಯ ಆವರಣದಲ್ಲಿ ಶುಕ್ರವಾರ ರೈತ ದಿನ ಆಚರಿಸಲಾಯಿತು. ರೈತ ಸಂಪರ್ಕ ಕೇಂದ್ರದ ಅಧಿಕಾರಿ ವಿಜಯಕುಮಾರ ಮೇಟಿ ಮಾತನಾಡಿ, ರೈತರು ಭತ್ತದ ನಾಟಿಗೆ ಮುನ್ನ ಬೀಜೋಪಚಾರ ಮಾಡಿದ ಸಸಿಗಳನ್ನು ಉಪಯೋಗಿಸಬೇಕು. ಇದರಿಂದ ರೋಗಬಾಧೆ ತಡೆಗಟ್ಟಬಹುದಾಗಿದೆ. ಬೆಳೆಗೆ ಸಂರಕ್ಷಣೆ ನೀಡಿದಂತಾಗುತ್ತದೆ ಎಂದರು. ಪ್ರಮುಖರಾದ ಎನ್.ಷಣ್ಮುಖಗೌಡ, ಜಿ.ಚಂದ್ರಪ್ಪ, ಸೋಮನಗೌಡ ಇಂಗಳಗಿ, ಶರಣೇಗೌಡ ಜಂಬಣ್ಣನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net