

ಗೊರೇಬಾಳ: ಗ್ರಾಮದ ನಿರುಪಾದೇಶ್ವರ 19ನೇ ಜಾತ್ರಾ ಮಹೋತ್ಸವ ಹಾಗೂ ಗುತ್ತೂರು ಮಾರುತೇಶ್ವರರ ಕಾರ್ತಿಕ ಮಹೋತ್ಸವ ಕಾರ್ಯಕ್ರಮ ನ.23 ಹಾಗೂ 24 ರಂದು ನಡೆಯಲಿವೆ. ನ.23ರಂದು ರಾತ್ರಿ ಭಜನಾ ಕಾರ್ಯಕ್ರಮ ಇರಲಿದೆ. ನ.24 ರಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಮೂರ್ತಿಗಳಿಗೆ ರುದ್ರಾಭಿಷೇಕ, ಬೆಳಗ್ಗೆ 8ಕ್ಕೆ ಉಚ್ಚಾಯ ಜರುಗಲಿದೆ. ಮಧ್ಯಾಹ್ನ ಭೂರಿ ಗಣಾರಾಧನೆ, ಮಹಾಪ್ರಸಾದ, ಸಂಜೆ ರೇಣುಕಾ ಯಲ್ಲಮ್ಮಗೆ ಉಡಿ ತುಂಬುವ ಕಾರ್ಯಕ್ರಮ, ನಿರುಪಾದೇಶ್ವರ ರಥೋತ್ಸವ ನಡೆಯಲಿದೆ. ಬಳಿಕ ಗುತ್ತೂರು ಮಾರುತೇಶ್ವರರ ಕಾರ್ತಿಕೋತ್ಸವ ನಡೆಯಲಿದೆ. ಜಾತ್ರೆಯಲ್ಲಿ ದೀರ್ಘದಂಡ ನಮಸ್ಕಾರ ಹಾಕುವ ಭಕ್ತರು ಸ್ವಚ್ಛತೆ ಕಾಪಾಡಬೇಕೆಂದು ಗುತ್ತೂರು ಮಾರುತೇಶ್ವರ ದೇವಾಲಯದ ಅರ್ಚಕ ಚನ್ನಪ್ಪ ತಾತ ತಿಳಿಸಿದ್ದಾರೆ.