ಗೊರೇಬಾಳ ಗ್ರಾಪಂ ಚುನಾವಣೆ, ನಾಗಮ್ಮ ಅಧ್ಯಕ್ಷೆ, ಈರಮ್ಮ ಉಪಾಧ್ಯಕ್ಷೆ

220622 Gorebala GP Election
ಗೊರೇಬಾಳ ಗ್ರಾಪಂ ಅಧ್ಯಕ್ಷೆಯಾಗಿ ನಾಗಮ್ಮ ಬಸವರಾಜ ಹಾಗೂ ಉಪಾಧ್ಯಕ್ಷೆಯಾಗಿ ಈರಮ್ಮ ಶರಣಪ್ಪ ಬುಧವಾರ ಆಯ್ಕೆಯಾದರು.
Published on

ಗೊರೇಬಾಳ: ಸ್ಥಳೀಯ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ನಾಗಮ್ಮ ಬಸವರಾಜ ಅಧ್ಯಕ್ಷೆ ಹಾಗೂ ಈರಮ್ಮ ಶರಣಪ್ಪ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಬಂಡಾಯ ಬೆಂಬಲಿತ ಸದಸ್ಯರ ಮೈತ್ರಿಕೂಟ ಅಧಿಕಾರ ಹಿಡಿದಿದೆ. ಪಂಚಾಯಿತಿಯಲ್ಲಿ ಒಟ್ಟು 31 ಸದಸ್ಯರಿದ್ದು, ಈ ಪೈಕಿ ಕಾಂಗ್ರೆಸ್ 13, ಜೆಡಿಎಸ್ 11 ಹಾಗೂ ಬಿಜೆಪಿ ಬೆಂಬಲಿತ 7 ಸದಸ್ಯರಿದ್ದಾರೆ. ಅಧ್ಯಕ್ಷೆ ನಾಗಮ್ಮಗೆ 20 ಹಾಗೂ ಉಪಾಧ್ಯಕ್ಷೆ ಈರಮ್ಮಗೆ 21 ಮತ ಚಲಾವಣೆಯಾದವು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಅಂಬಮ್ಮ ಆದೆಪ್ಪಗೆ 10, ಹಾಗೂ ಉಪಾಧ್ಯಕ್ಷೆ ಅಭ್ಯರ್ಥಿ ದೇವಪ್ಪ ನಾಯಕಗೆ 9 ಮತಗಳು ಚಲಾವಣೆಯಾದವು. ತಾಪಂ ಇಒ ಪವನಕುಮಾರ ಎಸ್.ದಂಡಪ್ಪನವರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಈ ಮೊದಲು ಗ್ರಾಪಂನಲ್ಲಿ ಜೆಡಿಎಸ್ ಬೆಂಬಲಿತರು ಅಧಿಕಾರದಲ್ಲಿದ್ದರು. ಅವಿಶ್ವಾಸ ಮಂಡನೆ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರನ್ನು ಪದಚ್ಯುತಿ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net