ರಾಮನ್ ಭಾರತದ ಮೇರು ಶಿಖರ

02-03-ಗೊರೇಬಾಳ-01
Published on

ಗೊರೇಬಾಳ: ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಿ.ವಿ.ರಾಮನ್ ಗೌರವಾರ್ಥ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ , ರಾಮನ್ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು.

ಮುಖ್ಯಗುರು ವನಮಾಲ ಮಾತನಾಡಿ, ವಿಜ್ಞಾನ ಆವಿಷ್ಕಾರದಿಂದ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಕೀರ್ತಿ ರಾಮನ್‌ಗೆ ಸಲ್ಲುತ್ತದೆ ಎಂದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಿತು. ಸರೋಜಿನಿ, ದೇವಿ, ದೀಪಾ, ಶಾಂತಾ, ಶ್ವೇತಾ, ಪಲ್ಲವಿ, ಹುಲಿಗೆಮ್ಮ ಮತ್ತು ಆಂಜನೇಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net