ಗಣೇಶ ಗಾಯತ್ರಿ ಮಾತಾ ರಥೋತ್ಸವ ಅದ್ದೂರಿ

Untitled design (14)
ಬಂಗಾರಿ ಕ್ಯಾಂಪಿನಲ್ಲಿ ಗಣೇಶ ಗಾಯತ್ರಿ ಮಾತಾ ರಥೋತ್ಸವ ಅದ್ದೂರಿಯಾಗಿ ಜರುಗಿತು.
Published on

ಗೊರೇಬಾಳ: ಬಂಗಾರಿ ಕ್ಯಾಂಪಿನಲ್ಲಿ ಹತ್ತನೇ ವರ್ಷದ ಗಣೇಶ ಗಾಯತ್ರಿ ಮಾತಾ ದೇವಿಯ ರಥೋತ್ಸವ ಸೋಮವಾರ ಸಂಜೆ ಅದ್ದೂರಿಯಾಗಿ ಜರುಗಿತು. ತೇರಿಗೆ ಭಕ್ತರು ಉತ್ತತ್ತಿಯನ್ನು ಎಸೆದು ಜಯಕಾರ ಕೂಗಿದರು.

ತೇರಿಗೆಉತ್ತತ್ತಿಯನ್ನು ಎಸೆದು ಭಕ್ತರು

ಮಹಿಳೆಯರು ತೇರು ಎಳೆಯುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ಬೆಳಗ್ಗೆ ಗಣೇಶ ಗಾಯತ್ರಿ ಮಾತೆಗೆ ಹಾಗೂ ರೇಣುಕಾರ ಮೂರ್ತಿಗಳಿಗೆ ರುದ್ರಾಭಿಷೇಕ ಹಾಗೂ ಶ್ರೀಚಕ್ರಕ್ಕೆ ಕುಂಕುಮಾರ್ಚನೆ ಸಲ್ಲಿಸಲಾಯಿತು.

ರಾಯಚೂರಿನ ಸಾವಿರ ದೇವರ ಸಂಸ್ಥಾನ ಕಿಲ್ಲೆ ಬ್ರಹ್ಮಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ರವಡಕುಂದಾ ಸಂಸ್ಥಾನ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಸಿಂಧನೂರಿನ ರಂಭಾಪುರಿ ಶಾಖಾಮಠದ ಸೊಮನಾಥ ಶಿವಾಚಾರ್ಯ ಸ್ವಾಮೀಜಿ, ತುರ್ವಿಹಾಳ ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತುರ್ವಿಹಾಳ ಪುರವರ ಹಿರೇಮಠ ಅಮರಗುಂಡ ಶಿವಾಚಾರ್ಯ ಸ್ವಾಮೀಜಿ, ಸಿದ್ದಾಶ್ರಮದ ಡಾ.ಸಿದ್ದರಾಮೇಶ್ವರ ಶರಣರು, ಸದಾನಂದ ತಾತ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net