

ಗೊರೇಬಾಳ: ದಸರಾ ಮಹೋತ್ಸವ ಅಂಗವಾಗಿ ಇಲ್ಲಿನ ಗ್ರಾಮ ದೇವತೆ ದ್ಯಾವಮ್ಮ ಮೂರ್ತಿ ಮೆರವಣಿಗೆ ಸುಮಂಗಲೆಯರಿಂದ ಕುಂಭೋತ್ಸವದೊಂದಿಗೆ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆನಿಂದ ದೇವಿಗೆ ವಿಶೇಷ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ ಧಾರ್ಮಿಕ ಕಾಕಾರ್ಯಕ್ರಮಗಳು ನಡೆದವು. ಬುಧವಾರದಿಂದ ಹನ್ನೊಂದು ದಿನಗಳವರೆಗೆ ದೇವಿ ಪುರಾಣ ಗ್ರಾಮದ ಕಾಳಿಕಾ ದೇವಸ್ಥಾನದಲ್ಲಿ ನಡೆಯಲಿದೆ. ಪುರಾಣ ಪ್ರವಚನಗಾರರಾದ ನರಸಪ್ಪ ಆಚಾರ ಹಾಗೂ ರವಡಕುಂದಾ ಅಮರಯ್ಯ ಸ್ವಾಮಿಗಳು ನಡೆಸಿಕೊಡಲಿದ್ದಾರೆ ಎಂದು ಮಠದ ಪಾಲಾಕ್ಷಯ್ಯ ಸ್ವಾಮಿಗಳು ತಿಳಿಸಿದರು. ಗ್ರಾಮದ ರೊಡ್ಡನವರ ವಿದ್ಯಾವತಿ ದಿ.ನೀಲಕಂಠಪ್ಪಗೌಡ ಹಾಗೂ ಅವರ ಕುಟುಂಬ 7.5 ಕೆಜಿ ಬೆಳ್ಳಿ ಪ್ರಭಾವಳಿಯನ್ನು ದೇವಿಗೆ ಸಮರ್ಪಿಸಿದರು.
ಪ್ರಮುಖರಾದ ಎನ್.ಷಣ್ಮುಖ ಗೌಡ, ವೀರೇಶ ಪಾಟಿಲ್, ಎನ್.ವಿಶ್ವನಾಥ, ಶರಣೇಗೌಡ ಪೋ.ಪಾ, ದೊಡ್ಡಬೀಮನಗೌಡ, ಎಚ್.ಬಸವರಾಜಪ್ಪ, ಆರ್.ರುದ್ರಗೌಡ, ಎಚ್.ಮಲ್ಲಿಕಾರ್ಜುನ, ತುಂಬಳ ದೇವರಾಜಗೌಡ, ಲಿಂಗಪ್ಪ ಆಚಾರ, ಶಂಕರಪ್ಪಾ ಆಚಾರ, ಅಮರೇಶಪ್ಪ ಆಚಾರ, ಅಂಬಣ್ಣ ಆಚಾರ, ಜೆ.ಚನ್ನಬಸವನಗೌಡ, ಸುಬ್ಬಣ್ಣನವರ ಬಸವರಾಜ, ಸುಬ್ಬಣ್ಣನವರ ಗೋವಿಂದ ರಡ್ಡಿ, ಅರ್ಚಕರಾದ ಬಸವರಾಜ ಸ್ವಾಮಿ, ಶಿವಕುಮಾರ ಸ್ವಾಮಿ ಇತರರಿದ್ದರು.