

ಗೊರೇಬಾಳ: ನಾನು ಎಲ್ಲರನ್ನು ನಂಬಿದ್ದೆ. ನಂಬಿದವರೇ ನನಗೆ ಮೋಸ ಮಾಡಿದರು. ಹೀಗಾಗಿ ರಾಜ್ಯದಲ್ಲಿ ನನ್ನದೇ ಪಕ್ಷ ಸಂಘಟನೆ ಮಾಡುವ ಮೂಲಕ ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡಿ ತೊರಿಸುತ್ತೇನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನರೆಡ್ಡಿ ಹೇಳಿದರು. ಗ್ರಾಮದಲ್ಲಿ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಜಾರಿಯೇ ಪಕ್ಷದ ಸಂಕಲ್ಪ. ಯಾವ ಪಕ್ಷ ಅಧಿಕಾರ ನಡೆಸಿದರೂ ಕಲ್ಯಾಣ ಕರ್ನಾಟಕ ಶೇ.10 ಅಭಿವೃದ್ಧಿ ಆಗಿಲ್ಲ ಎಂದರು. ಪ್ರಮುಖರಾದ ನೆಕ್ಕಂಟಿ ಮಲ್ಲಿಕಾರ್ಜುನ , ಸಿದ್ದು ಹೂಗಾರ, ಹನುಮನಗೌಡ ಹಟ್ಟಿ, ಶಂಕರಗೌಡ ಗುಡಿ, ದೊಡ್ಡ ಭೀಮನಗೌಡ ನೆಟೆಕಲ್, ಆರ್.ಮೋಹನರಡ್ಡಿ, ದೊಡ್ಡಮನಿ ಶರಣೇಗೌಡ ನೆಟೆಕಲ್, ಆರ್.ರುದ್ರಗೌಡ, ಸೋಮನಗೌಡ ಇಂಗಳಗಿ, ಎನ್.ಚನ್ನಬಸವ, ಪಿ.ಮಲ್ಲನಗೌಡ, ತುಂಬಳ ಚನ್ನಬಸವ ಇದ್ದರು.