ಬಂಜಾರ ಸಮುದಾಯ ಮುಖ್ಯವಾಹಿನಿಗೆ ಬರುವಂತಾಗಲಿ

UDP-16-7-Gormaati
ಉಡುಪಿಯಲ್ಲಿ ಆಯೋಜಿಸಿದ್ದ ಗೋರ್​ ಮಾಟಿ ನಾಟಕವನ್ನು ಡಾ. ತಲ್ಲೂರು ಶಿವರಾಂ ಶೆಟ್ಟಿ ಉದ್ಘಾಟಿಸಿದರು. ಪೂರ್ಣಿಮಾ, ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ, ಉಡುಪಿ ವಿಶ್ವನಾಥ ಶೆಣೈ, ಕಲಾವಿದ ಅಂಜು ಸಿಂಗ್​ ಇದ್ದರು.
Published on

ಡಾ. ತಲ್ಲೂರು ಶಿವರಾಂ ಶೆಟ್ಟಿ ಆಶಯ | 'ಗೋರ್​ ಮಾಟಿ' ನಾಟಕ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ವಿಶಿಷ್ಟ ಸಾಂಸ್ಕೃತಿಕ ಆಚರಣೆ, ಸಾಂಪ್ರದಾಯ, ಉಡುಗೆ ತೊಡುಗೆಯ ಮೂಲಕ ಗಮನ ಸೆಳೆಯುವ ಬಂಜಾರ ಸಮುದಾಯ ಮುಖ್ಯವಾಹಿನಿಗೆ ಬರಬೇಕು. ಹಿಂದಿನ ಯುದ್ಧಕಾಲದಲ್ಲಿ ಆಹಾರ ಸರಬರಾಜು ಮಾಡುತ್ತಿದ್ದ ಈ ಜನಾಂಗದ ಕಲೆ-ಸಂಸ್ಕೃತಿ, ಬದುಕು-ಬವಣೆ ಪರಿಚಯಿಸುವ ಕಾರ್ಯ ಅನುಕರಣೀಯ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ ಶ್ಲಾಘಿಸಿದರು.

ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಯಕ್ಷಗಾನ ಕಲಾರಂಗ (ಐವೈಸಿ) ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕಾರ್ಕಳ ಯಕ್ಷರಂಗಾಯಣ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಂಗಾಯಣ ಮೈಸೂರು ರೆಪರ್ಟರಿ ಪ್ರಸ್ತುತಿಯ ಗೋರ್​ ಮಾಟಿ ನಾಟಕವನ್ನು ಡೋಲಕ್​ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

UDP-16-7A-Gormaati
ಗೋರ್​ ಮಾಟಿ ನಾಟಕದ ದೃಶ್ಯ.

ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ, ಜಿಲ್ಲೆಯ ಕಲಾ ಪೋಷಕ ಉಡುಪಿ ವಿಶ್ವನಾಥ ಶೆಣೈ, ರಂಗಾಯಣ ಮೈಸೂರಿನ ಹಿರಿಯ ಕಲಾವಿದ ಅಂಜು ಸಿಂಗ್​ ಉಪಸ್ಥಿತರಿದ್ದರು.

ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪದ್ಮಾಸಿನಿ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ

ಸಿ.ಬಸವಲಿಂಗಯ್ಯ ಅವರ ಪರಿಕಲ್ಪನೆ, ಸಂಗೀತ ಮತ್ತು ನಿರ್ದೇಶನದಲ್ಲಿ ಬಂಜಾರ ಜನಾಂಗದ ಕಲೆ, ಸಂಸತಿ, ಅವರ ಜೀವನ ರೀತಿ ಅನಾವರಣಗೊಳಿಸುವ 'ಗೋರ್​ ಮಾಟಿ' ನಾಟಕ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರೂ ಸಹ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಪೂರ್ಣ ನಾಟಕ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಬಂಜಾರ ಜನಾಂಗದ ದುಃಖದುಮ್ಮಾನಗಳು, ಅವರ ಸಂಸ್ಕೃತಿಯನ್ನು ಕಲಾವಿದರು ಮನೋಜ್ಞ ಅಭಿನಯದೊಂದಿಗೆ ಪ್ರಸ್ತುತ ಪಡಿಸಿದ್ದಾರೆ. ಈ ರಂಗ ಪ್ರಯೋಗ ತುಂಬ ಚೆನ್ನಾಗಿ ಮೂಡಿ ಬಂದಿದೆ ಎಂದರು.

UDP-16-7B-Gormaati
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net