

ಕೊರಟಗೆರೆ: ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯವನ್ನು ಜು.20ರಿಂದಲೇ ಸೀಲ್‌ಡೌನ್ ಮಾಡಲಾಗಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ದೇವಸ್ಥಾನದ ಅರ್ಚಕರೊಬ್ಬರ ಪತ್ನಿಗೆ ಸೋಂಕು ದೃಢವಾಗಿತ್ತು ಎಂಬ ಕಾರಣಕ್ಕೆ ವಾರದಿಂದ ದೇವಾಲಯ ಮುಚ್ಚಲಾಗಿದ್ದು, ಅಧಿಕೃತ ಮಾಹಿತಿ ಅಭಾವದಿಂದ ಜನರು ಬಂದು ವಾಪಸಾಗುತ್ತಿದ್ದಾರೆ.ಮಾರಮ್ಮ ದೇಗುಲದ ಅರ್ಚಕರ ಪತ್ನಿಗೆ ಸೋಂಕು ತಗುಲಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರ್ಚಕರ ಪ್ರಾಥಮಿಕ ಸಂಪರ್ಕದಲ್ಲಿದ್ದ ದೇವಾಲಯದ 80 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ವರಮಹಾಲಕ್ಷ್ಮೀ ಹಬ್ಬಕ್ಕೂ ತೆರೆಯುವುದು ಅನುಮಾನ: ವರಮಹಾಲಕ್ಷ್ಮೀ ಹಬ್ಬ ಜು.31ರಂದು ನಡೆಯಲಿದ್ದು, ಗೊರವನಹಳ್ಳಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ, ಈ ವರ್ಷ ಹಬ್ಬದ ದಿನ ದೇವಾಲಯ ತೆರೆಯುವ ಬಗ್ಗೆಯೂ ಸ್ಪಷ್ಟನೆ ಸಿಕ್ಕಿಲ್ಲ.
ಮಹಾಲಕ್ಷ್ಮೀ ದೇವಾಲಯ ಸೀಲ್‌ಡೌನ್ ಮಾಡಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿರುತ್ತಾರೆ. ಈ ಬಗ್ಗೆ ಮಧುಗಿರಿ ಉಪವಿಭಾಗಾಧಿಕಾರಿಯನ್ನು ವಿಚಾರಿಸುತ್ತೇನೆ. ವರಮಹಾಲಕ್ಷ್ಮೀ ಹಬ್ಬದಲ್ಲಿ ದರ್ಶನದ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡುತ್ತೇವೆ. ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ ದೇಗುಲ ನೌಕರನ ಪತ್ನಿಗೆ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ಜು.20ರಿಂದ ಲಕ್ಷ್ಮೀ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ. ಆದರೆ, ನಿತ್ಯ ಪೂಜೆ ನಡೆಯುತ್ತಿದೆ. ಆಡಳಿತ ಮಂಡಳಿ ಸೂಚನೆಯಂತೆ ನಾವು ಕೆಲಸ ಮಾಡುತ್ತೇವೆ. ಪ್ರಸನ್ನಕುಮಾರ್ ದೇವಾಲಯ ಪ್ರಧಾನ ಅರ್ಚಕ