

ಹುಬ್ಬಳ್ಳಿ: ತಾಲೂಕಿನ ಶೆರೇವಾಡ ಗ್ರಾಮದಲ್ಲಿನ ಬಸವೇಶ್ವರ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಸಮಾರಂಭ ಆ. 31ರಂದು ಮಧ್ಯಾಹ್ನ 3.30 ಗಂಟೆಗೆ ನಡೆಯಲಿದೆ.
ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಫಕೀರಸಿದ್ಧರಾಮ ಮಹಾಸ್ವಾಮೀಜಿ, ಕುಂದಗೋಳ ತ್ರಿವಿಧ ದಾಸೋಹ ಮಠದ ಕಲ್ಯಾಣಪುರ ಬಸವಣ್ಣಜ್ಜನವರು, ವರೂರಿನ ವೀರೇಶ ಶಾಂತವೀರ ಮಠದ ವಿರೂಪಾಕ್ಷಯ್ಯ ಮಹಾಸ್ವಾಮೀಜಿ ಉಪಸ್ಥಿತರಿರುವರು.
ಸಮಸ್ತ ಸದ್ಭಕ್ತರು ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.