

ಮಡಿಕೇರಿ:
ಹಿಂದೂ ಜಾಗರಣ ವೇದಿಕೆ ವತಿಯಿಂದ ವೀರಾಜಪೇಟೆಯ ಬಿಟ್ಟಂಗಾಲ ಸಮೀಪದ ಅಂಬಟ್ಟಿ ಗ್ರಾಮದಲ್ಲಿ ಮಂಗಳವಾರ ಗೋಪೂಜೆ ನೆರವೇರಿಸಲಾಯಿತು. ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ಮಾತೃ ಸ್ವರೂಪಿಯಾದ ಗೋವನ್ನು ದೀಪಾವಳಿ ಸಂದರ್ಭ ವಿಶೇಷವಾಗಿ ಪೂಜಿಸಲಾಗುತ್ತದೆ.
ಅಂಬಟ್ಟಿಯಲ್ಲಿ ನಡೆದ ಗೋಪೂಜೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ್ ಯೋಗೇಶ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸುನಿಲ್ ಮಾದಾಫುರ, ವಿರಾಜಪೇಟೆ ತಾಲೂಕು ಸಹ ಸಂಯೋಜಕ್ ಗಣೇಶ್ ಸೇರಿದಂತೆ ಸ್ಥಳೀಯ ಹಿಂ.ಜಾ.ವೇ. ಕಾರ್ಯಕರ್ತರು ಗ್ರಾಮಸ್ಥರು ಸಾರ್ವಜನಿಕರು ಪಾಲ್ಗೊಂಡಿದ್ದರು.
ಮಡಿಕೇರಿ ಸಮೀಪದ ಮೇಕೇರಿ ಗ್ರಾಮದಲ್ಲೂ ದೀಪಾವಳಿ ಹಿನ್ನೆಲೆಯಲ್ಲಿ ಗೋಪೂಜೆ ನೆರವೇರಿಸಲಾಯಿತು. ಈ ಪ್ರಯುಕ್ತ ದೇವಾಲಯವನ್ನು ದೀಪಗಳಿಂದ ಅಲಂಕಾರ ಮಾಡಲಾಗಿತ್ತು.