ಶೀಘ್ರ ಗೋಧಿ ಸರಬರಾಜು ಮಾಡಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಸೂಚನೆ

07 mlr 0..01
Published on

ಮಾಲೂರು: ನ್ಯಾಯಬೆಲೆ ಅಂಗಡಿಗಳಿಗೆ ಗೋಧಿ ವಿತರಣೆ ಮಾಡಬೇಕಾಗಿರುವುದರಿಂದ ಶೀಘ್ರ ಸರ್ಕಾರಿ ಗೋದಾಮುಗಳಿಗೆ ಗೋಧಿ ಸರಬರಾಜು ಮಾಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ತಿಳಿಸಿದರು.

ಮಾಲೂರು ಪಟ್ಟಣದ ಹೊರವಲಯದಲ್ಲಿರುವ ಆಧಾನಿ ಲಾಜಿಸ್ಟಿಕ್ ಲಿಮಿಟೆಡ್‌ಗೆ ಮಂಗಳವಾರ ಭೇಟಿ ನೀಡಿ ಸರ್ಕಾರಿ ಗೋದಾಮುಗಳಿಗೆ ಸರಬರಾಜಾಗುತ್ತಿರುವ ಗೋಧಿ ಪರಿಶೀಲಿಸಿ ಮಾತನಾಡಿ, ಕಾರ್ಮಿಕರ ಕೊರತೆಯಿಂದ ಸರ್ಕಾರಿ ಗೋದಾಮುಗಳಿಗೆ ಗೋಧಿ ಸರಬರಾಜಾಗುವುದು ವಿಳಂಬವಾಗುತ್ತಿದೆ. ಶೀಘ್ರ ಸರಬರಾಜು ಮಾಡಬೇಕು ಎಂದು ಆಧಾನಿ ಲಾಜಿಸ್ಟಿಕ್ ಲಿಮಿಟೆಡ್ ವ್ಯವಸ್ಥಾಪಕ ನಿದೇರ್ಶಕರಿಗೆ ಸೂಚಿಸಿದರು.

ನಂತರ ಪಟ್ಟಣದ ದ್ಯಾಪಸಂದ್ರ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಗೆ ಮತ್ತು ಶಂಕರನಾರಾಯಣಸ್ವಾಮಿ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಆಹಾರ ದಾನ್ಯಗಳ ವಿತರಣೆಯನ್ನು ಪರಿಶೀಲಿಸಿ ಜನತೆ ರಾಜ್ಯದಲ್ಲಿ ಕರೊನಾ ಇರುವುದರಿಂದ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡುವುದರ ಮೂಲಕ ಪಡಿತರ ಪಡೆಯಬೇಕು ಎಂದರು.

ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಮಂಜುಳಾ, ಆಹಾರ ಇಲಾಖೆ ಆಯುಕ್ತ ಶ್ಯಾಮಲಾ ಎಕ್ಬಾಲ್, ಕೋಲಾರ ಜಿಲ್ಲಾ ಉಪನಿರ್ದೇಶಕ ನಾಗರಾಜ್ ಕೆಳಗಿನಮನೆ, ತಹಸೀಲ್ದಾರ್ ಎಂ.ಮಂಜುನಾಥ್, ತಾಪಂ ಇಒ ಕೃಷ್ಣಪ್ಪ, ಆಹಾರ ಶಿರಸ್ತೆದಾರ್ ಶಾಂತಾಬಾಯಿ, ಆಹಾರ ನಿರೀಕ್ಷಕರಾದ ಚಂದ್ರಮೋಹನ್, ಮಂಜುನಾಥಗೌಡ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net