

ಕಡಬ: ವಲಯ ಹವ್ಯಕ ಪ್ರತಿನಿಧಿ ಪರಿಷತ್‌ನ ಅಧ್ಯಕ್ಷರಾಗಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಬಿ. ಮರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಘುರಾಮ ಬೆತ್ತೋಡಿ, ಸವಿತಾ ಹರೀಶ ಭಟ್ ಕೊಡೆಂಕಿರಿ, ಪ್ರಧಾನ ಕಾರ್ಯದರ್ಶಿಯಾಗಿ ಗೋವಿಂದರಾಜ್ ಖಂಡಿಗೆ, ಜತೆ ಕಾರ್ಯದರ್ಶಿಯಾಗಿ ರಂಜನ್ ಶ್ರೀರಾಮ ಪಿಲಿಮಜಲು, ಖಜಾಂಚಿಯಾಗಿ ಶ್ಯಾಮ್ ಶರತ್ ಎಡಿಂಜ, 15 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.