ಗೋಪಾಲ್ ಟಿಎಪಿಸಿಎಂಎಸ್ ಅಧ್ಯಕ್ಷ

6 nrp 2 (1)
ಎನ್.ಆರ್.ಪುರದ ಟಿಎಪಿಸಿಎಂಎಸ್ ಸೊಸೈಟಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು. ಅರುಣ್‌ಕುಮಾರ್,ಕೆ.ಪಿ.ಸಂಪತ್‌ಕುಮಾರ್,ಬೆಮ್ಮನೆ ಮೋಹನ್ ಇದ್ದರು.
Published on

ಎನ್.ಆರ್.ಪುರ: ಪಟ್ಟಣದ ಟಿಎಪಿಸಿಎಂಎಸ್‌ನ ನೂತನ ಅಧ್ಯಕ್ಷರಾಗಿ ಮುತ್ತಿನಕೊಪ್ಪದ ಎಸ್.ಗೋಪಾಲ್, ಉಪಾಧ್ಯಕ್ಷರಾಗಿ ಸೀತಾರಾಮ್ ಅವಿರೋಧವಾಗಿ ಆಯ್ಕೆಯಾದರು.
ಶನಿವಾರ ಟಿಎಪಿಸಿಎಂಎಸ್ ಕಚೇರಿ ಆವರಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮುತ್ತಿನಕೊಪ್ಪದ ಎಸ್.ಗೋಪಾಲ್, ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಎಸ್.ಸೀತಾರಾಮ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಆಭಿವೃದ್ದಿ ಅಧಿಕಾರಿ ಶಿವಕುಮಾರ್ ಇಬ್ಬರ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್ ಮಾತನಾಡಿ, ನೂತನ ಅಧ್ಯಕ್ಷರು,ಉಪಾಧ್ಯಕ್ಷರು ಸಂಘದ ಸದಸ್ಯರ ಸಲಹೆ ಪಡೆದು ಸಂಘವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಬೇಕು. ಸಂಘದಲ್ಲಿ ಸದಸ್ಯರ ವ್ಯವಹಾರ ಕಡಿಮೆಯಾಗಿದ್ದು, ಸಹಕಾರಿ ಕಾಯ್ದೆಯಡಿ ಕನಿಷ್ಟ ವ್ಯವಹಾರ ಮಾಡಬೇಕು ಎಂದು ಸದಸ್ಯರಿಗೆ ಸಲಹೆ ನೀಡಬೇಕು ಎಂದರು.
ಹಿರಿಯ ಸಹಕಾರಿ ಕೆ.ಪಿ.ಸಂಪತ್‌ಕುಮಾರ್ ಮಾತನಾಡಿ, ನೂತನ ಅಧ್ಯಕ್ಷರು,ಉಪಾಧ್ಯಕ್ಷರು ಸದಸ್ಯರ ಭಾವನೆಗಳಿಗೆ ಸ್ಪಂದಿಸಬೇಕು. ರಸಗೊಬ್ಬರ, ಕೃಷಿ ಉಪಕರಣ ಸೇರಿದಂತೆ ರೈತರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಸಕಾಲಕ್ಕೆ ಸಿಗುವಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ನಿಕಟಪೂರ್ವ ಅಧ್ಯಕ್ಷ ಬೆಮ್ಮನೆ ಮೋಹನ್, ನಿರ್ದೇಶಕರಾದ ಜಿ.ಎಂ.ಪ್ರಕಾಶ್, ಎಚ್.ಡಿ.ಮಿಥುನ, ಎಂ.ಟಿ.ಶ್ರೀನಿವಾಸ್, ಡಿ.ಆರ್.ನಾಗರಾಜ್, ಮೀನಾಕ್ಷಿ ಕಾಂತರಾಜ್,ಎಂ.ಟಿ.ಕುಮಾರ್, ರಾಮಚಂದ್ರ, ಬಿ.ಎ.ರಾಜಪ್ಪಗೌಡ, ಕೆ.ಸಿ.ಜಯಪಾಲ, ಎಸ್.ರಂಗಪ್ಪ, ವಿ.ಕೆ.ಸುಧಾಕರ, ಬಿಜೆಪಿ ಮುಖಂಡರಾದ ಬಿ.ಎಸ್.ಆಶೀಶ್‌ಕುಮಾರ್, ಎನ್.ಎಂ.ಕಾಂತರಾಜ್, ಎಚ್.ಡಿ.ಲೋಕೇಶ್, ನಾಗೇಶ್, ಕೆಸವಿ ಮಂಜುನಾಥ್, ಶ್ರೀನಾಥ್, ಜಗದೀಶ್, ಸುರಭಿ ರಾಜೇಂದ್ರ, ದಿವಾಕರ್, ಸಂದೀಪ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net