ಇನ್ನು ಗೂಗಲ್ ಮ್ಯಾಪ್‌ನಲ್ಲಿಯೇ ಗೊತ್ತಾಗುತ್ತೆ ಅಗತ್ಯ ವಸ್ತುಗಳು ಸಿಗುವ ಸ್ಥಳ!

Google Map
Published on

ಬೆಂಗಳೂರು: ಕರೊನಾ ಲಾಕ್‌ಡೌನ್ ಘೋಷಣೆಯಾಗಿದ್ದರೂ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಮನೆಯಿಂದ ಹೊರಬಂದು ಎಲ್ಲೆಂದರಲ್ಲಿ ಓಡಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

ಈ ರೀತಿ ಓಡಾಡುವುದನ್ನು ತಡೆಯಲು ಬೆಂಗಳೂರಿನ ಪೊಲೀಸರು ಹೊಸದೊಂದು ಐಡಿಯಾ ಕಂಡುಹಿಡಿದಿದ್ದಾರೆ.

ದಿನಸಿ ಸಾಮಗ್ರಿ ಅಂಗಡಿ, ತರಕಾರಿ ಮತ್ತು ಹಣ್ಣಿನ ಅಂಗಡಿ, ಮೆಡಿಕಲ್ ಶಾಪ್, ನಿರ್ಗತಿಕರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಊಟ ವಿತರಿಸುವ, ದೇಣಿಗೆ ಸಂಗ್ರಹಿಸುವ ಸ್ಥಳದ ಆಯಾ ಠಾಣಾ ವ್ಯಾಪ್ತಿಯ ಮಾಹಿತಿಯನ್ನು ಬೆಂಗಳೂರು ನಗರದ ದಕ್ಷಿಣ ವಿಭಾಗ ಪೊಲೀಸರು ಗೂಗಲ್ ಮೂಲಕ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ.

958 ದಿನಸಿ ಮತ್ತು ಹಾಲಿನ ಅಂಗ, 323 ಹಣ್ಣು ಮತ್ತು ತರಾಕರಿ ಅಂಗಡಿ, 479 ಮೆಡಿಕಲ್ ಶಾಪ್ ಸೇರಿ ಒಟ್ಟು 1,926 ಅಗತ್ಯ ವಸ್ತುಗಳು ಲಭ್ಯವಿರುವ ಅಂಗಡಿಯ ಮಾಹಿತಿ ಸಿಗಲಿದೆ.

ಇದರಿಂದ ಜನರು ಅಂಗಡಿಗಳನ್ನು ಹುಡುಕುತ್ತ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುವುದು ತಪ್ಪುತ್ತದೆ. ಅಲ್ಲದೆ, ತುರ್ತು ಸಂದರ್ಭವಿದ್ದರೆ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಬಹುದು ಎಂದು ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net