

ದೇವದುರ್ಗ: ಯಾದಗಿರಿ ಜಿಲ್ಲೆ ಹಾಗೂ ದೇವದುರ್ಗ ತಾಲೂಕಿನ ಸುಮಾರು 100 ಹಳ್ಳಿಗಳಿಗೆ ಕುಡಿವ ನೀರು ಕಲ್ಪಿಸುವ ತಾಲೂಕಿನ ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ತುಂಬಿ ತುಳುಕುತ್ತಿದೆ. ಮುಂಜಾಗ್ರತೆ ಕ್ರಮವಾಗಿ ಹೆಚ್ಚುವರಿ ನೀರು 60ಗೇಟ್‌ಗಳ ಮೂಲಕ ನದಿಗೆ ಹರಿಸಲಾಗುತ್ತಿದೆ.
ಸುಮಾರು 1ಟಿಂಎಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯವಿರುವ ಬ್ಯಾರೇಜ್ ಸದ್ಯ ಭರ್ತಿಯಾಗಿದೆ. 4.62ಮೀಟರ್ ನೀರಿನ ಸಂಗ್ರಹ ಎತ್ತರ ಸಾಮರ್ಥ್ಯವಿದೆ. ಮುಂಜಾಗ್ರತೆಯಿಂದ 0.818 ಟಿಎಂಸಿ ನೀರು ಸಂಗ್ರಹಿಸಿ ಉಳಿದ ನೀರು ನದಿಗೆ ಹರಿಸಲಾಗಿದೆ. ಸದ್ಯ ಒಳಬರುವ 2ಲಕ್ಷ ಕ್ಯೂಸೆಕ್ ನೀರು ಯಥವತ್ತಾಗಿ ನದಿಗೆ ಹರಿಸಲಾಗಿದೆ.
ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಸದ್ಯ ಭರ್ತಿಯಾಗಿದ್ದು, 60 ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ. ಸದ್ಯ 2ಲಕ್ಷ ಕ್ಯೂಸೆಕ್ ಒಳಹರಿವಿದ್ದು, ಬಂದ ನೀರು ನದಿಗೆ ಹರಿಸುತ್ತಿದ್ದೇವೆ. 1 ಟಿಎಂಸಿ ಅಡಿ ಸಾಮರ್ಥ್ಯವಿದ್ದು, ಹತ್ತಾರು ಹಳ್ಳಿಗೆ ಕುಡಿವ ನೀರು, ಕೃಷಿ ಉಪಯೋಗಕ್ಕಾಗಿ ಬ್ಯಾರೇಜ್ ನಿರ್ಮಿಸಲಾಗಿದೆ. | ವಿಘ್ನೇಶ, ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಉಸ್ತುವಾರಿ ಇಂಜಿನಿಯರ್