ಹಾನಗಲ್ಲ ಕುಮಾರ ಶ್ರೀಗಳ ಸದ್ಭಾವನಾ ಪಾದಯಾತ್ರೆ

18MDG2 PADAYATRE
Published on

ಮುಂಡರಗಿ: ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳ 157ನೇ ಜಯಂತಿ ಮಹೋತ್ಸವ ನಿಮಿತ್ತ ಮಂಗಳವಾರ ತಾಲೂಕಿನ ಮಕ್ತುಂಪೂರ, ಬೆಣ್ಣಿಹಳ್ಳಿ ಗ್ರಾಮದಲ್ಲಿ ಸದ್ಭಾವನಾ ಪಾದಯಾತ್ರೆ ಶ್ರದ್ಧಾ ಭಕ್ತಿಯಿಂದ ಜರುಗಿತು.
ವಿವಿಧ ಮಠಾಧೀಶರು ಭಾಗವಹಿಸಿದ್ದ ಸದ್ಭಾವನಾ ಪಾದಯಾತ್ರೆಯಲ್ಲಿ ಮಕ್ತುಂಪೂರ, ಬೆಣ್ಣಿಹಳ್ಳಿ ಸದ್ಭಕ್ತರು ಭಕ್ತಿ ಭಾವದಿಂದ ಭಜನೆ, ವಾದ್ಯಮೇಳಗಳೊಂದಿಗೆ, ಕುಂಭ ಕಳಶದೊಂದಿಗೆ ವೈಭವದಿಂದ ಸ್ವಾಗತಿಸಿಕೊಂಡರು.
ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸದ್ಗುಣಗಳ ದೀಕ್ಷೆ, ದುಶ್ಚಟಗಳ ಭಿಕ್ಷೆ ಅನ್ನೋ ಸಂದೇಶ ಸಾರುವ ಮೂಲಕ ಗ್ರಾಮಸ್ಥರಲ್ಲಿ ಮಠಾಧೀಶರು ಅರಿವು ಮೂಡಿಸಿದರು.
ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ರುದ್ರಾಕ್ಷಿ ಧಾರಣಾ ಕಾರ್ಯಕ್ರಮ ನೇರವೇರಿತು. ಶ್ರೀ ಕುಮಾರೇಶ್ವರ ಜಯಂತಿ ಉತ್ಸವ ಸಮಿತಿ ಮಠಾಧೀಶರು ಪಾಲ್ಗೊಂಡಿದ್ದರು. ಶ್ರೀ ಕುಮಾರೇಶ್ವರರ ಕುರಿತು ವಿವಿಧ ಶ್ರೀಗಳು ಮಾತನಾಡಿದರು. ಗ್ರಾಮಸ್ಥರು ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net