ಗೂಡ್ಸ್​ ವಾಹನದಿಂದ ಬಿದ್ದು ಪ್ರಯಾಣಿಕ ಸಾವು

Crime Logo
Published on

ಹಿರೇಕೆರೂರ: ಗೂಡ್ಸ್​ ವಾಹನದ ಮೇಲೆ ಕುಳಿತ್ತಿದ್ದ ವ್ಯಕ್ತಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕೋಡ ಗ್ರಾಮದ ಬಳಿ ಗುರುವಾರ ನಡೆದಿದೆ.

ಪಟ್ಟಣದ ಕುಂಬಾರ ನಗರದ ಅಶೋಕ ಈಶಪ್ಪ ಕುಬಸದ (52) ಮೃತ ವ್ಯಕ್ತಿ.

ಇವರು ಗೂಡ್ಸ್​ ವಾಹನದಲ್ಲಿ ಕಿರಾಣಿ ಸಾಮಗ್ರಿಗಳ ಮೇಲೆ ಕುಳಿತ್ತಿದ್ದರು. ವಾಹನದ ಚಾಲಕ ಅಡ್ಡಾತಿಡ್ಡಿಯಾಗಿ ವಾಹನ ಓಡಿಸಿದ್ದರಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಂಸಬಾವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net