

ಮಳವಳ್ಳಿ: ಪಟ್ಟಣದ ಅನಂತ ರಾಮ್ ವೃತ್ತದಲ್ಲಿ ಮಂಗಳವಾರ ರಾತ್ರಿ ಕೋಳಿಗಳನ್ನು ತುಂಬಿಕೊಂಡು ಸಾಗಣೆ ಮಾಡುತ್ತಿದ್ದ ಮಿನಿ ಗೂಡ್ಸ್ ವಾಹನ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದೆ.
ಮಿನಿ ಗೂಡ್ಸ್ ವಾಹನ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಕೊಳ್ಳೇಗಾಲ ಕಡೆಯಿಂದ ಕೋಳಿ ತುಂಬಿಸಿಕೊಂಡು ಮೈಸೂರು ಕಡೆ ತೆರಳುತ್ತಿದ್ದಾಗ ಮದ್ದೂರು ಕಡೆಯಿಂದ ಎಂ ಸ್ಯಾಂಡ್ ತುಂಬಿದ್ದ ಟಿಪ್ಪರ್ ಪಟ್ಟಣದ ಅನಂತ್ ರಾಮ್ ವೃತ್ತದಲ್ಲಿ ಎರಡೂ ವಾಹನಗಳು ತಿರುವು ಪಡೆದುಕೊಳ್ಳುವಾಗ ಅವಘಡ ಸಂಭವಿಸಿದೆ. ಅಪಘಾತದ ರಭಸಕ್ಕೆ ಮಿನಿ ಗೂಡ್ಸ್ ವಾಹನ ಪಲ್ಟಿ ಹೊಡೆದ ಪರಿಣಾಮ ವಾಹನದಲ್ಲಿದ್ದ ನೂರಾರು ಕೋಳಿಗಳು ಮೃತಪಟ್ಟಿವೆ. ಚೆಲ್ಲಾಪಿಲ್ಲಿಯಾಗಿ ಜೀವವಿದ್ದ ಕೋಳಿಗಳನ್ನು ಸ್ಥಳದಲ್ಲಿದ್ದವರು ಒತ್ತೊಯ್ದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.