ಟ್ರಾೃಕ್ಟರ್‌ಗೆ ಗೂಡ್ಸ್ ಡಿಕ್ಕಿ, ಇಬ್ಬರಿಗೆ ಗಾಯ

Tracter accident
Published on


ಹಿರೇಕೆರೂರ: ಟ್ರ್ಯಾಕ್ಟರಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಟ್ರಾೃಕ್ಟರ್‌ನಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ಪಟ್ಟಣದ ಚಿಕ್ಕೇರೂರ, ಹಂಸಭಾವಿ ಕ್ರಾಸ್ ಬಳಿ ಬುಧವಾರ ನಡೆದಿದೆ. ತಾಲೂಕಿನ ಬಾಳಂಬೀಡ ಗ್ರಾಮದ ಗಣೇಶ ಮಹಾದೇವಪ್ಪ ಶಿವನಕ್ಕನವರ(65) ಹಾಗೂ ಶ್ರೀಧರ ಗಣೇಶಪ್ಪ ಶಿವನಕ್ಕನವರ(38) ಗಾಯಗೊಂಡವರು. ಬುರಡಿಕಟ್ಟಿ ಬಳಿಯ ತಮ್ಮ ಜಮೀನಿಗೆ ಹೋಗಲು ಟ್ರ್ಯಾಕ್ಟರಿಗೆ ಕಲ್ಟಿವೇಟರ್ ಜೋಡಿಸಿಕೊಂಡು ಹೊರಟಿದ್ದರು. ಅದೇ ಮಾರ್ಗವಾಗಿ ಚಿಕ್ಕೇರೂರಿನಿಂದ ಅತಿ ವೇಗವಾಗಿ ಬಂದ ಗೂಡ್ಸ್ ಟ್ರ್ಯಾಕ್ಟರಿಗೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ ಚಕ್ರಗಳು, ಕಲ್ಟಿವೇಟರ್ ಬೇರೆಯಾಗಿವೆ. ಅದರಲ್ಲಿದ್ದ ಗಣೇಶಪ್ಪ ಹಾಗೂ ಇವರ ಪುತ್ರ ಶ್ರೀಧರ್‌ಗೆ ಗಂಭೀರ ಗಾಯವಾಗಿದೆ. ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net