ಗೂಡ್ಸ್ ಆಟೋ ಮಗುಚಿ ತರಕಾರಿ ವ್ಯಾಪಾರಿ ಸಾಪು

Crime Logo
Published on

ಮೈಸೂರು: ಬೋಗಾದಿ ರಸ್ತೆಯ ಗಂಗೋತ್ರಿ ಬಡಾವಣೆಗೆ ತಿರುವುಪಡೆಯುವ ಜಾಗದಲ್ಲಿನ ಡುಬ್ಬದ ಬಳಿ ಚಾಲನೆಯಲ್ಲಿ ನಿಯಂತ್ರಣ ಕಳೆದುಕೊಂಡು ಗೂಡ್ಸ್ ಆಟೋ ಮಗುಚಿ ಬಿದ್ದಿದ್ದು, ಆಟೋದಲ್ಲಿದ್ದ ತರಕಾರಿ ವ್ಯಾಪಾರಿ ಮೃತಪಟ್ಟಿದ್ದಾರೆ.

ಎಚ್.ಡಿ.ಕೋಟೆಯ ಕೃಷ್ಣಯ್ಯನಹುಂಡಿಯ ಕುಮಾರ್(40) ಮೃತ. ಇವರು ಗೂಡ್ಸ್ ಆಟೋರಿಕ್ಷಾ ಚಾಲಕನೊಂದಿಗೆ ಗ್ರಾಮದ ಜಮೀನಿಂದ ತರಕಾರಿ ತುಂಬಿಕೊಂಡು ಎಂಜಿ ರಸ್ತೆಯಲ್ಲಿ ಮಾರುಕಟ್ಟೆಗೆ ಬರಲು ನಗರದ ಕಡೆ ಬರುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಅಪಘಾತದಿಂದ ಗಾಯಗೊಂಡಿದ್ದ ಕುಮಾರ್ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net