

ಕಲಘಟಗಿ: ಪಟ್ಟಣದ ಗುಡ್ನ್ಯೂಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ಜರುಗಿದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗುಡ್ನ್ಯೂಸ್ ಪದವಿ ಪೂರ್ವ ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಇತ್ತೀಚೆಗೆ ಆಯೋಜಿಸಿದ್ದ ಕ್ರೀಡಾ ಕೂಟದ ಗುಂಪು ಆಟ ಕೋಕೋ, ವಾಲಿಬಾಲ್, ಥ್ರೋಬಾಲ್ನಲ್ಲಿ ಗುಡ್ನ್ಯೂಸ್ ಕಾಲೇಜಿನ ಬಾಲಕ ಹಾಗೂ ಬಾಲಕಿಯರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಬಾಲಕಿಯರ ಕಬಡ್ಡಿ ಆಟದಲ್ಲಿ ಸಂಗಮೇಶ್ವರ ಕಾಲೇಜು ಪ್ರಥಮ ಸ್ಥಾನ ಪಡೆದಿದೆ. ಬಾಲಕಿಯರ ಪ್ರಥಮ ವಿರಾಗ್ರಣಿ ಶೃತಿ ಸಾದರ, ಲಕ್ಷ್ಮಿ ಕಮತಮನಿ, ಬಾಲಕರ ವೈಯಕ್ತಿಕ ವೀರಾಗ್ರಣಿ ಈರಣ್ಣ ಕಟಗಿ ಗುಡ್ ನ್ಯೂಸ್ ಕಾಲೇಜು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಕ್ರೀಡಾಕೂಟದಲ್ಲಿ ತಾಲೂಕಿನ ಏಳು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಶಸ್ತಿ ವಿತರಣೆ ಸಮಾರಂಭ ಸಮಾರಂಭದಲ್ಲಿ ಗುಡ್ನ್ಯೂಸ್ ಕಾಲೇಜಿನ ಕಾರ್ಯದರ್ಶಿ ರೆ. ಬ್ರ ವರ್ಗಿಸ್, ಪ್ರಾಚಾರ್ಯ ನವೀನಾ ರಡ್ಡೇರ, ಡಾ. ಬಿ.ಜಿ. ಬಿರಾದಾರ, ಡಾ. ಮಹೇಶ ಹೊರಕೇರಿ, ದೈಹಿಕ ಶಿಕ್ಷಕ ರಾಮು ಲಮಾಣಿ, ತ್ರಿವೇಣಿ ಸಾವಂತ, ಶಶಿಕುಮಾರ ಕಟ್ಟಿಮನಿ, ಮೋಹನ ಕಳಸೂರ, ಶಶಿಕಲಾ ಪಾಟೀಲ, ಜಾಪರ್ ಭಾವನವರ, ಶಾಂತ ಪಮ್ಮಾರ, ಮಹದೇವ ಉಳಾಗಡ್ಡಿ, ಮಹಾದೇವಿ ಬಡಿಗೇರ ಇದ್ದರು.