ಉತ್ತಮ ಆಲೋಚನೆಗಳು ವ್ಯಕ್ತಿತ್ವ ರೂಪಿಸುತ್ತವೆ

12 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಮ್ಮಲ್ಲಿ ಅಪಾರವಾದ ಶಕ್ತಿ ಇದೆ. ನಮ್ಮ ಉತ್ತಮ ಆಲೋಚನೆಗಳು ನಮ್ಮ ವ್ಯಕ್ತಿತ್ವ ರೂಪಿಸುತ್ತವೆ. ನಮ್ಮ ಯೋಚನೆಗಳ ಮೇಲೆ ನಾವು ನಿಗಾ ವಹಿಸಿದಾಗ ಮಾತ್ರ ನಮ್ಮ ಜೀವನವನ್ನು ನಾವು ಚೆನ್ನಾಗಿ ರೂಪಿಸಿಕೊಳ್ಳಬಹುದು ಎಂದು ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ನಗರದ ಜೆಎಸ್​ಎಸ್​ನ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಎನ್​ಎಸ್​ಎಸ್​ ಘಟಕ ಮತ್ತು ಜೆಎಸ್​ಎಸ್​ ಐಟಿಐ ಕಾಲೇಜುಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನ ನಿಮಿತ್ತ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಚ್ಚಾ ಶಕ್ತಿ, ದೃಢ ಸಂಕಲ್ಪ, ಛಲ ಇದ್ದರೆ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ. ಏಕಾಗ್ರತೆ ನಮ್ಮ ಸಾಮರ್ಥ್ಯ ಹೆಚ್ಚಿಸಬಲ್ಲವು. ನಮಗೆ ಅನಂತ ಶಕ್ತಿ, ಅನಂತ ಉತ್ಸಾಹ, ಅನಂತ ಧೈರ್ಯ, ಅನಂತ ತಾಳ್ಮೆ ಬೇಕು. ಆಗ ಮಾತ್ರ ನಾವು ಮಹತ್ಕಾರ್ಯ ಸಾಧಿಸಬಹುದು ಎಂಬುದು ವಿವೇಕಾನಂದರ ನಿಲುವಾಗಿತ್ತು ಎಂದರು.

ಡಾ. ಜಿನದತ್ತ ಹಡಗಲಿ ಮಾತನಾಡಿ, ಸನ್ಯಾಸಿ ಎಂದರೆ ಸಮಾಜದ ಜನರಿಂದ ದೂರ ಇದ್ದು, ವೈರಾಗ್ಯದಿಂದ ಕಾಡು, ಗುಹೆಗಳಲ್ಲಿ ಏಕಾಂತ ವಾಸ ಮಾಡುತ್ತಾರೆ ಎಂಬ ಕಲ್ಪನೆ ಇದೆ. ಆದರೆ, ಈ ಕಲ್ಪನೆ ತೊಡೆದು ಹಾಕಿದ ವಿವೇಕಾನಂದರು ಆತ್ಮದ ಉದ್ಧಾರಕ್ಕಿಂತ ಹೆಚ್ಚಾಗಿ, ದೀನದಲಿತರ ಸೇವೆ ಮಾಡುತ್ತ ಸರ್ವರ ಆತ್ಮೋಧ್ದಾರಕ್ಕಾಗಿ ಶ್ರಮವಿಸುವವರೇ ನಿಜವಾದ ಸನ್ಯಾಸಿ ಎಂದು ಸಾರಿದವರು ಎಂದರು.

ಡಾ. ಆರ್​.ವಿ. ಚಿಟಗುಪ್ಪಿ, ಬಲಭೀಮ ಹಾವನೂರ, ಮಂಜುನಾಥ ಪೂಜಾರ, ಸಿಬ್ಬಂದಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net