

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಸ್ವಉದ್ಯೋಗ ಮೂಲಕ ಸುತ್ತಮುತ್ತಲಿನ ಪರಿಸರದ ಯುವಜನರಿಗೆ ಉದ್ಯೋಗ ನೀಡುಡುವಂತಾಗಲಿ. ವ್ಯವಹಾರದಲ್ಲಿ ಲಾಭ-ನಷ್ಟವನ್ನು ಸಮಾನವಾಗಿ ಸ್ವೀಕರಿಸಬೇಕು.ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುವ ರುಡ್‌ಸೆಟ್ ಸಂಸ್ಥೆ ಜೀವನದ ಪಾಠ ಕಲಿಸಿ ಕೊಡುತ್ತದೆ. ಇದು ಯಾವುದೇ ಕಾಲೇಜಿನ ವಿದ್ಯಾಭ್ಯಾಸದಲ್ಲಿ ಸಿಗುವುದಿಲ್ಲ ಎಂದು ಉಜಿರೆ ದಿಶಾ ಸಮೂಹ ಸಂಸ್ಥೆಗಳ ಮಾಲೀಕ ಅರುಣ ಕುಮಾರ್ ಹೇಳಿದರು.
ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 10 ದಿನ ನಡೆದ ಹಪ್ಪಳ ಸಂಡಿಗೆ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದರು.
ಕೌಶಲ ತರಬೇತಿ ನೀಡಿದ ಲತಾ ಮೈಸೂರು ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಸ್ವಾಗತಿಸಿ ರೂಪಿಸಿದರು. ಉಪನ್ಯಾಸಕ ಕೆ.ಕರುಣಾಕರ ಜೈನ್ ವಂದಿಸಿದರು. ಶಾಂತ, ಸುರೇಶ್, ಫೈಜ್‌ಲ್ ಭಾಷಾ, ರಮ್ಮಿತಾ ತರಬೇತಿಯ ಅನುಭವ ಹಂಚಿಕೊಂಡರು.