

ಕುಕನೂರು; ಉತ್ತಮ ಸಮಾಜ ನಿರ್ಮಾಣಕ್ಕೆ ಸಾಕ್ಷರತೆ ಒಂದು ಸಾಧನವಾಗಿದ್ದು, ಪ್ರತಿಯೊಬ್ಬರೂ ಅಕ್ಷರವಂತರಾಗಬೇಕು ಎಂದು ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಹೇಳಿದರು.
ಇದನ್ನೂ ಓದಿ: ಕೊಡವ ಸಮಾಜದಿಂದ ಕೈಲ್ಪೊಳ್ದ್ ಆಚರಣೆ
ತಾಲೂಕಿನ ತಳಕಲ್ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಗ್ರಾಪಂ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಸಾಕ್ಷರತೆ, ಸಮಾಜದಲ್ಲಿ ಹೇಗೆ ಬಾಳಬೇಕು ಎಂಬುದನ್ನು ಕಲಿಸುತ್ತದೆ. ಇಂದಿನ ದಿನಮಾನದಲ್ಲಿ ಡಿಜಿಟಲ್ ಸಾಕ್ಷರತೆಯೂ ಅಷ್ಟೇ ಅವಶ್ಯಕತೆ ಇದೆ. ಉತ್ತಮ ಸಾಕ್ಷರತೆಯಿಂದ ಉನ್ನತ ಸ್ಥಾನಮಾನ, ಗೌರವ, ಉನ್ನತ ಉದ್ಯೋಗಾವಕಾಶ ಸಿಗುತ್ತವೆ. ಇದರಿಂದ ಸಮಾಜವೂ ಉತ್ತಮಗೊಳ್ಳುತ್ತದೆ ಎಂದರು.
ಗ್ರಾಪಂ ಅಧ್ಯಕ್ಷೆ ಜಹೀರಾಬೇಗಂ ಜಾಕೀರ್‌ಹುಸೇನ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಲ್.ಡಿ. ಜೋಷಿ, ಬಿಇಒ ಅಶೋಕಗೌಡರ, ಜಿಲ್ಲಾ ಕಾರ್ಯಕ್ರಮ ಸಹಾಯಕ ಚಂದ್ರಪ್ಪ ಬಂಡಿ, ಗ್ರಾಪಂ ಉಪಾಧ್ಯಕ್ಷೆ ಜಿಂದಾಬಿ ಗುಡುಗುಡಿ, ಪಿಡಿಒ ವೀರನಗೌಡ್ರ ಚನ್ನವೀರಗೌಡ್ರ, ಸದಸ್ಯರಾದ ತಿಮ್ಮಣ್ಣ ಚೌಡಿ, ಮಹಮ್ಮದ್ ರಾಜುದ್ದೀನ್ ಕೊಪ್ಪಳ, ಉಮೇಶಗೌಡ ಪೊಲೀಸ್ ಪಾಟೀಲ್, ಶ್ರೀಧರ್ ಹಣವಾಳ, ವೀರೇಶ ಬಿಸನಳ್ಳಿ, ಕವಿತಾ ಮಲ್ಲಿಕಾರ್ಜುನ ಛಲವಾದಿ, ಎಚ್.ಕೆ.ಹೈತಾಪುರ, ಗೀತಾ ತತ್ತಿ, ಚೈತ್ರಾ ಹಿರೇಗೌಡ್ರು, ದೇವಕ್ಕ ಬಂಗಿ, ವಿಜಯಲಕ್ಷ್ಮೀ ಹಿಂದಲಮನಿ, ರೇಣುಕಾ ಮಡಿವಾಳರ, ಗ್ರಾಪಂ ಕಾರ್ಯದರ್ಶಿ ಆದಿಬಸಯ್ಯ ಹಿರೇಮಠ್ ಇತರರಿದ್ದರು.
ಎಂಎಸ್‌ಸಿ ವಿದ್ಯಾರ್ಥಿನಿ ಬಸವರಶ್ಮೀ ಸುರೇಶ್ ಭೀಮರಡ್ಡಿ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸ್ವರ್ಣ ಪದಕ ಪಡೆದಿದ್ದಕ್ಕಾಗಿ ಸನ್ಮಾನಿಸಲಾಯಿತು. ರಂಗೋಲಿ, ಭಾಷಣ, ಹಾಡು ಹಾಡುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.