

ಬೆಳಗಾವಿ: ನಾವು ಪುಸ್ತಕಗಳನ್ನು ಹೆಚ್ಚು ಓದುವುದರಿಂದ ನಮ್ಮ ಸಂತೋಷ ಹೆಚ್ಚಾಗುತ್ತದೆ. ನಮ್ಮ ಜೀವನದಲ್ಲಿ ಎಷ್ಟೇ ಲೌಕಿಕ ಸಮಸ್ಯೆ ಎದುರಿಸಿದರೂ ಪುಸ್ತಕಗಳು ನಮಗೆ ಅವುಗಳನ್ನು ಪರಿಹರಿಸುವ ಶಕ್ತಿ ನೀಡುತ್ತವೆ ಎಂದು ಗೋವಾ ಮರಾಠಿ ಅಕಾಡೆಮಿಯ ಅಧ್ಯ, ಪ್ರಾಚಾರ್ಯ ಅನಿಲ ಸಾಮಂತ ಹೇಳಿದರು.
ಹಿಂದವಾಡಿಯ ಗುರುದೇವ ರಾನಡೆ ಮಂದಿರದಲ್ಲಿ ಸಾರ್ವಜನಿಕ ವಾಚನಾಲಯವು ಬುಧವಾರ ಆಯೋಜಿಸಿದ್ದ ವಿಶ್ವ ಪುಸ್ತಕ ದಿನಾಚರಣೆಯಲ್ಲಿ ಅವರು ಮಾತನಾಡಿ, ನಾವು ಸುಶಿತ, ಸುಸಂಸತ, ಸಮತೋಲಿತ ಮತ್ತು ಸ್ವಾವಲಂಬಿ ಭಾರತ ಸೃಷ್ಟಿಸಲು ಬಯಸಿದರೆ, ಪುಸ್ತಕಗಳನ್ನು ಓದುವುದು ಮುಖ್ಯ ಎಂದರು.
ಒಂದು ವಸ್ತುವಿನ ಮೌಲ್ಯವು ಅದನ್ನು ಸೇವಿಸಿದ ನಂತರ ಕೊನೆಗೊಳ್ಳುತ್ತದೆ. ಆದರೆ, ಪುಸ್ತಕಗಳ ವಿಷಯದಲ್ಲಿ ಹಾಗಲ್ಲ. ನೀವು ಪುಸ್ತಕವನ್ನು ಓದುತ್ತಿದ್ದಂತೆ, ನಿಮ್ಮ ಸಂತೋಷವು ಬೆಳೆಯುತ್ತದೆ. ಪುಸ್ತಕ ಓದುವುದರಿಂದ ಸಿಗುವ ಆನಂದವು ಇತರ ಎಲ್ಲ ಆನಂದಗಳಿಗಿಂತ ಭಿನ್ನವಾಗಿರುತ್ತದೆ ಎಂದು ಹೇಳಿದರು.
ಜೀವನದಲ್ಲಿ ಪುಸ್ತಕಗಳ ಮಹತ್ವ ಅನನ್ಯವಾಗಿದೆ. ಪುಸ್ತಕಗಳು ನಮಗೆ ಬದುಕಲು ಕಲಿಸುತ್ತದೆ. ಜೀವನದ ಅರಿವನ್ನು ಬೆಳೆಸುತ್ತವೆ. ಮೌಲ್ಯವಿಲ್ಲದ ವ್ಯವಹಾರ, ಮಾನವೀಯತೆಯಿಲ್ಲದ ವಿಾನ, ಕೊಡುಗೆಯಿಲ್ಲದ ಧರ್ಮ ಮತ್ತು ಗುರಿಯಿಲ್ಲದ ಶಿಣ ಇಂದಿನ ಜೀವನದ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ. ಪುಸ್ತಕಗಳ ಮಹತ್ವವನ್ನು ಒತ್ತಿ ಹೇಳುತ್ತಾ, ಹಾಡುಗಳಿಲ್ಲದ ಮನೆಗೆ ಧ್ವನಿ ಇರುವುದಿಲ್ಲ. ಒಳ್ಳೆಯ ಚಿತ್ರಗಳಿಲ್ಲದ ಮನೆಗೆ ಒಳ್ಳೆಯ ಕಣ್ಣುಗಳಿಲ್ಲ ಮತ್ತು ಪುಸ್ತಕಗಳಿಲ್ಲದ ಮನೆಗೆ ಮೆದುಳು ಇಲ್ಲ ಎಂದರು.
ಗ್ರಂಥಾಲಯದ ಅಧ್ಯ ಅನಂತ ಲಾಡ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪಾಧ್ಯ ಪ್ರೊ.ವಿನೋದ ಗಾಯಕವಾಡ ಪರಿಚಯಿಸಿದರು. ಸುನಿತಾ ಮೋಹಿತೆ ನಿರೂಪಿಸಿದರು. ರುನಾಥ ಬಾಂಡಗಿ ವಂದಿಸಿದರು. ವಿವಿಧ ೇತ್ರಗಳ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.