ಉತ್ತಮ ಸೇವೆಯೇ ಬ್ಯಾಂಕ್ ಅಭಿವೃದ್ಧಿಗೆ ಸಹಕಾರಿ

Good service helps the development of the bank
ಬನಹಟ್ಟಿಯ ಕರ್ಣಾಟಕ ಬ್ಯಾಂಕ್ ಆವರಣದಲ್ಲಿ ವಿನೂತನ ಮಾದರಿಯ ಹಣ ಜಮಾವಣೆ ಹಾಗೂ ವಿತರಣೆ ಯಂತ್ರಕ್ಕೆ ರಬಕವಿ ಉದ್ಯಮಿ ಸತೀಶ ಹಜಾರೆ ಚಾಲನೆ ನೀಡಿದರು. ಮ್ಯಾನೇಜರ್ ಪ್ರವೀಣ ಕಾಲತಿಪ್ಪಿ, ರೇವಣ್ಣ ಉಮದಿ ಇದ್ದರು.
Published on

ರಬಕವಿ-ಬನಹಟ್ಟಿ: ಗ್ರಾಹಕರಿಗೆ ಉತ್ತಮ ಸೇವೆ ನೀಡಿದಾಗ ಮಾತ್ರ ಬ್ಯಾಂಕ್‌ಗಳು ಹಾಗೂ ಗ್ರಾಹಕರು ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದು ರಬಕವಿ ಜವಳಿ ಉದ್ಯಮಿ ಸತೀಶ ಹಜಾರೆ ಹೇಳಿದರು.

ಬನಹಟ್ಟಿ ಕರ್ಣಾಟಕ ಬ್ಯಾಂಕ್‌ನ ಎಟಿಎಂ ಹಾಗೂ ಮಾನವ ರಹಿತ ಹಣ ಭರಣಾ ಮಷಿನ್‌ಗೆ ಭಾನುವಾರ ಬೆಳಿಗ್ಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಾರ್ವಜನಿಕವಾಗಿ ಸೇವೆ ಮಾಡುವ ಯಾವುದೇ ಕ್ಷೇತ್ರವಾಗಿರಲಿ ಸೇವೆ ಬಯಸಿ ಬಂದ ಪ್ರತಿ ಗ್ರಾಹಕನಿಗೂ ಹೃದಯ ತುಂಬಿ ಸೇವೆ ಮಾಡಿದಾಗ ಮಾತ್ರ ಆ ಸಂಸ್ಥೆ ಉತ್ತರೋತ್ತರವಾಗಿ ಬೆಳೆದು ಹೆಮ್ಮರವಾಗಲು ಸಾಧ್ಯ. ಕರ್ಣಾಟಕ ಬ್ಯಾಂಕ್ ಕೂಡ ಸಂಸ್ಥಾಪಕರ ಹಾಗೂ ಸಿಬ್ಬಂದಿ ಪ್ರಾಮಾಣಿಕ ಸೇವೆಯಿಂದ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.

ವಿನೂತನ ತಂತ್ರಜ್ಞಾನ ಬಳಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ಜೊತೆಗೆ ಸಮಯ ಉಳಿತಾಯ ಮಾಡುವ ಬ್ಯಾಂಕ್ ಕಾರ್ಯ ಶ್ಲಾಘನೀಯ. ಅವಳಿ ನಗರದ ಪ್ರತಿಯೊಬ್ಬ ಗ್ರಾಹಕ ಬ್ಯಾಂಕ್ ಸೇವೆ ಪಡೆದುಕೊಳ್ಳಬೇಕು ಎಂದರು.

ಬನಹಟ್ಟಿ ಶಾಖೆ ಮ್ಯಾನೇಜರ್ ಪ್ರವೀಣ ಕಾಲತಿಪ್ಪಿ ಮಾತನಾಡಿದರು. ವೇಂಕಟೇಶ ಭಟ್, ಶಂಕರ ಮುಂಡಗನೂರ, ಸಂಪತ್ ಹಡಗಲಿ, ವೆಂಕಪ್ಪ ಭುರೂಕ, ಈರಪ್ಪ ಕಾಜದಾರ, ಮಹಾದೇವ ತಡಸಲ, ಶಂಕರ ಯರನಡೊಳ್ಳಿ, ಜವಳಿ ವರ್ತಕರಾದ ಸುರೇಶ ಚಿಂಡಕ, ಕಲ್ಲಪ್ಪ ಕುಳ್ಳಿ, ಸುರೇಶ ಶಿರೋಳ, ಆನಂದ ಶಿವಪೂಜಿ, ರೇವಣ್ಣ ಉಮದಿ, ಪ್ರಶಾಂತ ಬಿದರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net