

ಎನ್.ಆರ್.ಪುರ: ಲಯನ್ಸ್ ಕ್ಲಬ್‌ಗೆ ಉತ್ತಮರನ್ನು ಸದಸ್ಯರಾಗಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಸಂಸ್ಥೆಯ 317ರ ಜಿಲ್ಲಾ ಕೋ ಆರ್ಡಿನೇಟರ್ ಎಚ್.ಎಂ.ತಾರಾನಾಥ್ ತಿಳಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷರು, ಕಾರ್ಯದರ್ಶಿ, ಇತರ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿ, ಜಿಲ್ಲೆ 317ಡಿ ವ್ಯಾಪ್ತಿಯಲ್ಲಿ 118 ಲಯನ್ಸ್ ಕ್ಲಬ್‌ಗಳಿದ್ದು 4,500 ಸದಸ್ಯರಿದ್ದಾರೆ. ಅಂತಾರಾಷ್ಟ್ರೀಯ ಲಯನ್ಸ್‌ನಿಂದ 11 ಡಯಲಿಸಿಸ್ ಕೇಂದ್ರಗಳು ಬಂದಿದೆ. ಇದರಲ್ಲಿ ಈ ಭಾಗದ 6 ಲಯನ್ಸ್ ಕ್ಲಬ್‌ಗಳಿಗಾಗಿ 2 ಡಯಾಲಿಸಿಸ್ ಕೇಂದ್ರವನ್ನು ಕೊಪ್ಪ ಆದರ್ಶ ಆಸ್ಪತ್ರೆಯಲ್ಲಿ ತೆರೆಯಲಾಗಿದೆ. ಎನ್.ಆರ್.ಪುರ ಲಯನ್ಸ್ ಕ್ಲಬ್ ಪ್ರಾರಂಭವಾಗಿ 11 ವರ್ಷ ಮುಗಿದಿದೆ. ಎಲ್ಲ ಅಧ್ಯಕ್ಷರೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಲಯನ್ಸ್ ಕ್ಲಬ್ ಮಾಜಿ ಗೌರ್ನರ್ ಎಚ್.ಜಿ.ವೆಂಕಟೇಶ್ ಮಾತನಾಡಿ, ಲಯನ್ಸ್ ಕ್ಲಬ್ ಉತ್ತಮ ಸದಸ್ಯರನ್ನು ಹೊಂದಿದೆ. ಲಯನೆಸ್ ಸದಸ್ಯರನ್ನು ಲಯನ್ಸ್ ಕ್ಲಬ್‌ಗೆ ಕರೆತರಬೇಕು ಎಂದು ಸಲಹೆ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ಮಾತನಾಡಿ, ನಾನು ಅಧ್ಯಕ್ಷನಾದ ಅವಧಿಯಲ್ಲಿ ಒಂದು ತಂಡವಾಗಿ ಕೆಲಸ ಮಾಡಿದ್ದೆ. ಕೊಪ್ಪದಲ್ಲಿ ಪ್ರಾರಂಭಿಸಿರುವ 2 ಡಯಾಲಿಸಿಸ್ ಕೇಂದ್ರದಲ್ಲಿ 35 ರೋಗಿಗಳು ಉಪಯೋಗ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ರಕ್ತನಿಧಿ ಕೇಂದ್ರ ಅಗತ್ಯವಾಗಿದ್ದು, ಎಲ್ಲ ಲಯನ್ಸ್ ಕ್ಲಬ್‌ಗಳು ಒಟ್ಟಾಗಿ ರಕ್ತನಿಧಿ ಕೇಂದ್ರ ಪ್ರಾರಂಭಿಸಬಹುದು ಎಂದು ಸಲಹೆ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಎನ್.ಎಸ್.ರವಿಚಂದ್ರ, ಕಾರ್ಯದರ್ಶಿಯಾಗಿ ಎ.ಎಸ್.ಕೃಷ್ಣಯ್ಯ, ಖಜಾಂಚಿಯಾಗಿ ಜಾನಕಿರಾಮ್ ರೆಡ್ಡಿ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಡಯಾಲಿಸಿಸ್ ಕೇಂದ್ರದ ನಿರ್ವಹಣೆಗಾಗಿ 1.50 ಲಕ್ಷ ರೂಪಾಯಿ ದಾನ ಮಾಡಿದ ಉದ್ಯಮಿ ಕೆ.ವಿ.ವಸಂತಕುಮಾರ್ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಡಿ.ರಮೇಶ್ ಕೊಡುಗೆಯಾಗಿ ನೀಡಿದ ಶಾಲಾ ಪರಿಕರಗಳನ್ನು ಕಟ್ಟಿನಮನೆ ಸರ್ಕಾರಿ ಪ್ರೌಢಶಾಲೆಗೆ ವಿತರಿಸಲಾಯಿತು. ರಿಜ್ವಾನ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಗೆ ದಾನಿಗಳಾದ ಎಂ.ಪಿ.ವರ್ಗೀಸ್ ಲ್ಯಾಪ್ ಟ್ಯಾಪ್ ವಿತರಿಸಿದರು.
ಪ್ರಾಂತೀಯ ಅಧ್ಯಕ್ಷ ಮಂಜುನಾಥ್, ವಲಯ ಅಧ್ಯಕ್ಷ ಸುಬ್ರಹ್ಮಣ್ಯ, ನಿರ್ಗಮಿತ ಕಾರ್ಯದರ್ಶಿ ಸಿಜು, ಖಜಾಂಚಿ ಎಚ್.ಎಂ.ಕೃಷ್ಣಮೂರ್ತಿ, ಶೃಂಗೇರಿ ಲಯನ್ಸ್ ಅಧ್ಯಕ್ಷ ಬೇಗಾನೆ ವಿವೇಕ, ಬಾಳೆಹೊನ್ನೂರು ಲಯನ್ಸ್ ಅಧ್ಯಕ್ಷ ಶಿವರಾಂ, ಕೊಪ್ಪ ಸಹ್ಯಾದ್ರಿ ಲಯನ್ಸ್ ಅಧ್ಯಕ್ಷೆ ಸುಮಾ, ಹರಹರಪುರ ಲಯನ್ಸ್ ಅಧ್ಯಕ್ಷೆ ಪಲ್ಲವಿ, ಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷೆ ಮಧುಲಿಕಾ, ಎಲ್ದೋ, ದಕ್ಷಿಣಾಮೂರ್ತಿ, ಎ.ಎಸ್.ಕೃಷ್ಣಯ್ಯ ಇದ್ದರು.