ಕವಿತಾಳದ ಕನ್ಯಾಸ್ಕೂಲ್‌ಗೆ ಉತ್ತಮ ಶಾಲೆ ಪ್ರಶಸ್ತಿ

ರಾಯಚೂರಿನ ಜಿಪಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೀತಿ ಆಯೋಗದ ಜಿಲ್ಲಾ ನೋಡಲ್ ಅಧಿಕಾರಿ ಡಾ.ರೇಣು ಅವರು ಕವಿತಾಳದ ಕನ್ಯಾಶಾಲೆ ಮುಖ್ಯಶಿಕ್ಷಕಿ ಮಂಜುಳಾ ಅಂಗಡಿಗೆ ಪ್ರಶಸ್ತಿ ನೀಡಿದರು. ಡಿಎಚ್‌ಒ ಸುರೇಂದ್ರ ಬಾಬು, ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಸಿರವಾರ ತಾಪಂ ಇಒ ಶಶಿಧರ ಸ್ವಾಮಿ ಇತರರಿದ್ದರು.

Published on

ಕವಿತಾಳ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ (ಕನ್ಯಾ ಶಾಲೆ)ಗೆ ನೀತಿ ಆಯೋಗದ ನೀಡುವ ‘ಉತ್ತಮ ಶಿಕ್ಷಣಕ್ಕಾಗಿ ಉತ್ತಮ ಶಾಲೆ’ ಪ್ರಶಸ್ತಿ ಒಲಿದಿದೆ.

ಕೆಲ ದಿನಗಳ ಹಿಂದೆ ನೀತಿ ಆಯೋಗದ ತಂಡ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಶಿಸ್ತು, ದಾಖಲಾತಿ, ಕುಡಿವ ನೀರು, ಶೌಚಗೃಹ, ಶಾಲಾ ವಾತಾವರಣ ಸೇರಿ ವಿವಿಧ ಅಂಶಗಳನ್ನು ಪರಿಶೀಲಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಶನಿವಾರ ರಾಯಚೂರು ಜಿಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೀತಿ ಆಯೋಗದ ಜಿಲ್ಲಾ ನೋಡಲ್ ಅಧಿಕಾರಿ ಡಾ.ರೇಣು ಅವರು ಶಾಲೆಯ ಮುಖ್ಯಶಿಕ್ಷಕಿ ಮಂಜುಳಾ ಅಂಗಡಿ ಅವರಿಗೆ ಸರ್ಕಾರಿ ಶಾಲೆಯ ‘ಉತ್ತಮ ಶಿಕ್ಷಣಕ್ಕಾಗಿ ಉತ್ತಮ ಶಾಲೆ’ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಜಿಲ್ಲಾ ನೋಡಲ್ ಅಧಿಕಾರಿ ಡಾ.ರೇಣು ಮಾತನಾಡಿ, ಸಿರವಾರ ತಾಲೂಕಿನ ಕವಿತಾಳದ ಕನ್ಯಾ ಶಾಲೆಯಲ್ಲಿ ವಿದ್ಯಾರ್ಥಿಗಳ ಶಿಸ್ತು, ಫಲಿತಾಂಶ, ಆರೋಗ್ಯವನ್ನು ಪರಿಗಣಿಸಿ ಉತ್ತಮ ಶಾಲೆ ಎಂದು ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದರು. ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಡಿಎಚ್‌ಒ ಸುರೇಂದ್ರ ಬಾಬು, ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಸಿರವಾರ ತಾಪಂ ಇಒ ಶಶಿಧರ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net