ದೇವಸ್ಥಾನಗಳಿಂದ ಉತ್ತಮ ಸಂಸ್ಕಾರ

ಅರಕಲಗೂಡು ತಾಲೂಕು ದೇವರಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀ ಆದಿಶಕ್ತಿ ಹಿತ್ತಲಮ್ಮ ದೇವಾಲಯದ ಸಮಾರಂಭವನ್ನು ದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು. ಕೆ.ಟಿ. ಲೋಕೇಶ್, ಸಂತೋಷ್ ಶಣವಿನಕುಪ್ಪೆ, ಕೃಷ್ಣಮೂರ್ತಿ ಇತರರಿದ್ದರು.
ಅರಕಲಗೂಡು ತಾಲೂಕು ದೇವರಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀ ಆದಿಶಕ್ತಿ ಹಿತ್ತಲಮ್ಮ ದೇವಾಲಯದ ಸಮಾರಂಭವನ್ನು ದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು. ಕೆ.ಟಿ. ಲೋಕೇಶ್, ಸಂತೋಷ್ ಶಣವಿನಕುಪ್ಪೆ, ಕೃಷ್ಣಮೂರ್ತಿ ಇತರರಿದ್ದರು.
Published on

ಅರಕಲಗೂಡು: ಮನುಷ್ಯ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುವುದರಿಂದ ಆತ್ಮಶುದ್ಧಿಯಾಗಿ ದೈವಾನುಗ್ರಹ ಹೊಂದಬಹುದು ಎಂದು ದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.

ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ  ಶ್ರೀ ಆದಿಶಕ್ತಿ ಹಿತ್ತಲಮ್ಮ ದೇವಾಲಯದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಊರಿನಲ್ಲಿ ದೇವಸ್ಥಾನಗಳಿದ್ದರೆ ಉತ್ತಮ ಸಂಸ್ಕಾರ ಬೆಳೆಯುತ್ತದೆ. ಸ್ನಾನ ಮಾಡಿದರೆ ದೇಹವಷ್ಟೇ ಶುಚಿಯಾಗುತ್ತದೆ. ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವುದರಿಂದ ಮನಸ್ಸು ಶುದ್ಧಿಯಾಗುತ್ತದೆ. ದೇವರ ದರ್ಶನದಿಂದ ಅನಾಚಾರಗಳು ದೂರಾಗುತ್ತವೆ ಎಂದರು.

ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಹೇಮಾವತಿ ಗಣೇಶ್ ವೇಲಾಪುರಿ, ಮಾಜಿ ಅಧ್ಯಕ್ಷ ಸ್ವಾಮಿಗೌಡ, ಮುಖಂಡರಾದ ಕೆ.ಟಿ. ಲೋಕೇಶ್, ಸಂತೋಷ್ ಶಣವಿನಕುಪ್ಪೆ, ಚನ್ನಕೇಶವೇಗೌಡ, ಮಂಜು, ವೀರಾಜ್, ರಾಜೇಂದ್ರ, ಸ್ವಾಮಿ, ಜವರಯ್ಯ, ಸುರೇಶ್, ಮಲ್ಲೇಶ್, ಧರ್ಮರಾಜ್, ಡಿ.ಆರ್. ಚಂದ್ರಶೇಖರ್ ಇತರರಿದ್ದರು.

ದೇವಸ್ಥಾನದಲ್ಲಿ ಪ್ರಾಣಪ್ರತಿಷ್ಠಾಪನೆ, ವಿವಿಧ ಪೂಜಾ ವಿಧಾನಗಳು ನಡೆದವು. ಗ್ರಾಮಸ್ಥರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net