ಉತ್ತಮ ಸಂಸ್ಕಾರದಿಂದ ಉಜ್ವಲ ಭವಿಷ್ಯ

web8
ಗುರ್ಲಾಪುರದ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಮಾಜಿ ಸಂಸದೆ ಮಂಗಲ ಅಂಗಡಿ ಭೂಮಿಪೂಜೆ ನೆರವೇರಿಸಿದರು. ಈಶ್ವರ ಮುರಗೋಡ, ಲಕ್ಷ್ಮಣ ಪೂಜಾರಿ, ಶ್ರೀಶೈಲ ಮುಗುಳಖೋಡ, ಸದಾನಂದ ಮುಗಳಖೋಡ ಇತರರಿದ್ದರು.
Published on

ಗುರ್ಲಾಪುರ: ಪ್ರತಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿದಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಮಾಜಿ ಸಂಸದೆ ಮಂಗಲ ಅಂಗಡಿ ಹೇಳಿದರು.

ಗ್ರಾಮದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ದಿ.ಸುರೇಶ ಅಂಗಡಿ ಅವರ ಕೊಡುಗೆ ಅನನ್ಯವಾಗಿದೆ. ಎಲ್ಲರ ಸಹಕಾರದಿಂದ ನಿರಂತರವಾಗಿ ಸಾಮಾಜಿಕ ಅಭಿವೃದ್ಧಿ ಶ್ರಮಿಸುವುದಾಗಿ ತಿಳಿಸಿದರು.

ಮಾಜಿ ಸಂಸದೆ ಮಂಗಲ ಅಂಗಡಿ, ಶ್ರದ್ಧಾ ಶೆಟ್ಟರ್, ಮುಖಂಡ ಪ್ರಕಾಶ ಮಾದರ ಅವರನ್ನು ಸನ್ಮಾನಿಸಲಾಯಿತು. ಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎಸ್.ಮುಗಳಖೋಡ, ಬಿ.ಸಿ.ಮುಗಳಖೋಡ, ಆರ್.ಬಿ.ನೇಮಗೌಡರ, ಸದಾಶಿವ ನೇರ್ಲಿ, ಕೆಂಪಣ್ಣ ದೇವರಮನಿ, ದುಂಡಪ್ಪ ಮುಗಳಖೋಡ, ಮಲ್ಲಪ್ಪ ನೇಮಗೌಡರ, ಶಿವಬಸು ಇಟ್ನಾಳ, ರಾಮಣ್ಣ ನೇಮಗೌಡರ, ಮಹಾದೇವ ಮುಕುಂದ, ರೇವಪ್ಪ ಸತ್ತಿಗೇರಿ, ಐ.ವೈ.ಮುಗಳಖೋಡ, ಎಂ ಬಿ ರಂಗಾಪುರ, ಸತ್ಯಪ್ಪ ಸುಳ್ಳನವರ, ಅಶೋಕ ಮುಗಳಖೋಡ, ಬಿಜೆಪಿ ಮುಖಂಡರಾದ ಆನಂದ ಮೂಡಲಗಿ, ಶ್ರೀಕಾಂತ ಕೌಜಲಗಿ, ಮಂಗಲಾ ಕೌಜಲಗಿ, ಮಹಾಲಿಂಗ ವಂಟಗೋಡಿ, ಶಿವಾನಂದ ತುಪ್ಪದ, ಡಾ.ಮಹೇಶ ಹಳ್ಳೂರ, ವೀರಭದ್ರ ನೆರ್ಲಿ, ಡಾ.ಬಿ.ಎಂ.ಪಾಲಬಾವಿ, ಈರಣ್ಣ ಕೊನ್ನೂರ, ಸಿದ್ಧಾರೂಡ ಮೆನಸಪ್ಪಗೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net