

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯವು ಇದೇ ಜುಲೈನಲ್ಲಿ ಅತ್ಯುತ್ತಮ ಆದಾಯ ಬೆಳವಣಿಗೆ ದಾಖಲಿಸಿದೆ.
ಪ್ರಯಾಣಿಕರ ಆದಾಯವು ಜುಲೈನಲಿ 286.28 ಕೋಟಿ ರೂ.ಗಳಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೆ. 7.51 ರಷ್ಟು ಹೆಚ್ಚಾಗಿದೆ
ಪಾರ್ಸೆಲ್ ಆದಾಯವು ಜುಲೈನಲ್ಲಿ 14.19 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 12.83 ಕೋಟಿ ರೂ.ಗಳಾಗಿದ್ದು, ಶೇ. 10.60 ರಷ್ಟು ಹೆಚ್ಚಾಗಿದೆ.
ಕಳೆದ ಜುಲೈಗೆ ಹೋಲಿಸಿದರೆ ಸಾಗಿಸಲಾದ ಪ್ರಯಾಣಿಕರ ಸಂಖ್ಯೆ 13.00 ಮಿಲಿಯನ್ ನಿಂದ 13.25 ಮಿಲಿಯನ್ ಗೆ ಏರಿದ್ದು, ಶೇ. 1.92ರಷ್ಟು ಬೆಳವಣಿಗೆಯಾಗಿದೆ. ಪರಿಣಾಮಕಾರಿ ಟಿಕೆಟ್ ತಪಾಸಣಾ ಪ್ರಯತ್ನಗಳ ಪರಿಣಾಮವಾಗಿ 42 ಸಾವಿರ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ 2.37 ಕೋಟಿ ರೂ.ಗಳ ಹೆಚ್ಚುವರಿ ಆದಾಯ ಗಳಿಸಿದೆ.
ಜುಲೈನ ಸರಕು ಆದಾಯವು 329.68 ಕೋಟಿ ರೂ.ಗಳಾಗಿದ್ದು, ಇದು ನೈಋತ್ಯ ರೈಲ್ವೆಯ ಒಟ್ಟಾರೆ ಆದಾಯದ ಪ್ರಮುಖವಾಗಿದೆ.
ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು, ಈ ಸಾಧನೆಯಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.