ಕಡಬ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ಆಶ್ರಯ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಭಾಗದಲ್ಲಿ ಮೂರು ತಿಂಗಳ ಉಚಿತ ಶಿಕ್ಷಣದ ಸಮಾರೋಪ ಸಮಾರಂಭ ಸವಣೂರು ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಕಾಲಘಟ್ಟದಲ್ಲಿ ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡೆದು, ಶಾಲೆಗೆ ಶೇ.100 ಫಲಿತಾಂಶ ತರುವ ಪ್ರಯತ್ನ ಮಾಡಬೇಕು. ಆಗ ಮಾತ್ರ ನೀವು ಗುರುಗಳಿಗೆ ನೀಡುವ ನಿಜವಾದ ದಕ್ಷಿಣೆ. ಆ ಪ್ರಯತ್ನ ಹಿಂದೆ ಸತತ ಪರಿಶ್ರಮ ಬೇಕು ಎಂದರು.
ಮುಖ್ಯಶಿಕ್ಷಕ ರಘು ಬಿ.ಅಧ್ಯಕ್ಷತೆ ವಹಿಸಿದ್ದರು. ವಿಶೇಷ ತರಗತಿಯ ವಿಜ್ಞಾನ ಶಿಕ್ಷಕ ಕಿಶನ್ ಬಿ.ವಿ., ಗಣಿತ ಶಿಕ್ಷಕಿ ನಯನಾ ಮಾತನಾಡಿದರು. ಆಂತರಿಕ ಲೆಕ್ಕ ಪರಿಶೋಧಕಿ ಶೀಲಾವತಿ, ಜನ ಜಾಗೃತಿ ವೇದಿಕೆಯ ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚೇತನಾ ಪ್ರಾಸ್ತಾವಿಸಿದರು. ಸೇವಾಪ್ರತಿನಿಧಿ ಅಮಿತಾ ಸ್ವಾಗತಿಸಿ, ಶಿಕ್ಷಕರಾದ ಕಿಶನ್ ವಂದಿಸಿದರು. ವಿಶೇಷ ತರಗತಿಯ ವಿದ್ಯಾರ್ಥಿ ಆಕಾಶ್ ಅನಿಸಿಕೆ ವ್ಯಕ್ತಪಡಿಸಿದರು.