ವಿದ್ಯಾನಿಧಿ ವಸತಿ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

1 VARSHINI
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಹಳಿಯಾಳ ರಸ್ತೆಯ ಬಸವನಗರದ ವಿದ್ಯಾನಿಧಿ ಆಂಗ್ಲ ಮಾಧ್ಯಮ ವಸತಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಉತ್ತಮವಾಗಿದೆ. 20 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 45 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಶೇ. 95ರಷ್ಟು ಫಲಿತಾಂಶದೊAದಿಗೆ ಶಾಲೆ ಎ ಶ್ರೇಣಿ ಪಡೆದಿದೆ.

ವರ್ಷಿಣಿ ಕುರಿ ಶೇ. 97 ಶಾಲೆಗೆ ಪ್ರಥಮ ಸ್ಥಾನ, ಗೌಸಿಯಾ ಮನಿಯಾರ ಶೇ. 95 ದ್ವಿತೀಯ, ಐಶ್ವರ್ಯ ಕುಸುಗಲ್ ಶೇ. 93 ತೃತೀಯ ಸ್ಥಾನ ಪಡೆದಿದ್ದಾಳೆ. ಶಿವಾನಿ ಚೌಧರಿ ಶೇ. 93, ಅಕ್ಷತಾ ರಾಠೋಡ ಶೇ. 91, ಲಾವಣ್ಯ ಸುಳ್ಳದ ಶೇ. 91, ಅಮಿತ ಹುಲಮನಿ ಶೇ. 91, ಮಲ್ಲಿಕಾರ್ಜನ ಹೊನ್ನಪ್ಪನವರ ಶೇ. 91, ಸಮರ್ಥ ಇತಾಪೆ ಶೇ. 90, ಶ್ರೀನಿವಾಸ ಕುರ್ಲಗೇರಿ ಶೇ. 90 ಅಂಕ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಶಿಕ್ಷಕರು, ಆಡಳಿತ ಮಂಡಳಿ ಅಭಿನಂದಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net