

ಹೊರ್ತಿ: ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಸ್ಥಳೀಯ ರೇವಣಸಿದ್ಧೇಶ್ವರ ಪಪೂ ಕಾಲೇಜಿನ ವಿಜ್ಞಾನ, ಕಲಾ ವಿಭಾಗಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದಲ್ಲಿ ಭಾರತಿ ಜಿಗಜೇವಣಿ 560 ಅಂಕ ಪಡೆದು ಕಾಲೇಜಿಗೆ ಪ್ರಥಮ, ಅವಿನಾಶ ಪಾಟೀಲ (560) ದ್ವಿತೀಯ, ದಾವಲ್ ಮಲಿಕ್ ದರ್ಶನಾಳ್ (549) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವೈಶಾಲಿ ಗೌಂಡಿ (547) ಹಾಗೂ ಭಾಗ್ಯಶ್ರೀ ಮೂವಿ 530 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಲ್ಲಿಕಾರ್ಜುನ ಹುನ್ನೂರ (496), ಅನುರಾಧ ಪೂಜಾರಿ 486 ಅಂಕಗಳನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ಎ. ಎಸ್. ಖೈನೂರ, ಕಾರ್ಯದರ್ಶಿ ಎಸ್. ಎ. ಖೈನೂರ, ಪ್ರಾಚಾರ್ಯ ಪಿ.ಎಂ. ಮಾಳೋತ್ತರ ಹಾಗೂ ಆಡಳಿತ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.