

ರಟ್ಟಿಹಳ್ಳಿ: ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟವಾಗಿದ್ದು, ನಿರಂತರ ಪರಿಶ್ರಮದಿಂದ ಅಧ್ಯಯನ ಮಾಡಬೇಕು. ಇದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜು ತಳವಾರ ಹೇಳಿದರು.
ತಾಲೂಕಿನ ನೇಶ್ವಿ ಗ್ರಾಮದ ಎನ್.ಜಿ. ಬಣಕಾರ ಪ್ರೌಢಶಾಲೆಯಲ್ಲಿ ಕ.ಪ್ರೌ.ಸ.ಶಿ. ಸಂಘದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಕನ್ನಡ, ಆಂಗ್ಲ ಮತ್ತು ಉರ್ದು ಮಾಧ್ಯಮದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಇಒ ಎನ್.ಶ್ರೀಧರ್, ಸಿಟಿಇ ಪ್ರವಾಚಕ ಬಿ.ಎಸ್. ಜಗದೀಶ್ವರ, ಹಿರೇಕೆರೂರು ತಾಲೂಕು ಅಧ್ಯಕ್ಷ ಮೇಘರಾಜ ಮಾಳಗಿಮನಿ, ಶಿಕ್ಷಣ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಸಂಘದ ಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಮಾತನಾಡಿದರು.
ಅಕ್ಷರ ದಾಸೋಹ ನಿರ್ದೇಶಕ ಎಚ್.ಎಚ್. ಜಾಡರ, ಎಸ್ಡಿಎಂಸಿ ಉಪಾಧ್ಯಕ್ಷ ದಾನಪ್ಪ ಬಣಕಾರ, ಜಯಪ್ಪ ಬೆನಕನಕೊಂಡ, ಟಿ.ಎಚ್. ಪಾಟೀಲ, ಸಿದ್ದಲಿಂಗಯ್ಯ ಬೊಮ್ಮಕ್ಕಳವರ, ಮುಖ್ಯ ಶಿಕ್ಷಕ ಸುರೇಶ ಕಣಗೂಟಗಿ, ಬಿ.ಆರ್. ತೆವರಿ, ನಾಗರಾಜ ಮಧ್ಯಾಹ್ನದವರ, ಷಣ್ಮುಖ ಜಿ.ಎಚ್., ಕೆ.ಎಚ್. ಕುಸಗೂರ, ಎಸ್ಡಿಎಂಸಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ನಂದಾ ದಾನಪ್ಪನವರ, ರವಿಕುಮಾರ ಎಸ್.ಕೆ., ಪ್ರವೀಣ ಎ.ಜಿ. ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿಗಳಿಗೆ ಸನ್ಮಾನ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಕನ್ನಡ ಮಾಧ್ಯಮದ ಯಶವಂತ ಬಣಕಾರ, ನೇತ್ರಾ ಉಜ್ಜಪ್ಪನವರ, ಶಿಫಾ ಮುಕ್ತ್ಯಾರ ಖಾಜಿ, ಆಂಗ್ಲ ಮಾಧ್ಯಮದಲ್ಲಿ ಬೀಬಿಸಾದಿಯಾ ದೊಡ್ಮನಿ, ಗೌಸಿಯಾಬಾನು ಉಕ್ಕಡಗಾತ್ರಿ, ನಿಧಿ ತುಮ್ಮಿನಕಟ್ಟಿ ಮತ್ತು ಉರ್ದು ಮಾಧ್ಯಮದ ಮದೀಹಾ ಕೌಸರ್, ಸುನೈನಾ ಬಾನು ತಹಸೀನ್ ಅಂಜುಮ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.