ಪದಬAಧ ಸ್ಪರ್ಧೆಗೆ ಉತ್ತಮ ಸ್ಪಂದನೆ

14 HPT 1B
Published on

ವಿಜಯವಾಣಿ, ದಿಗ್ವಿಜಯ ಸಹಯೋಗದಲ್ಲಿ ಆಯೋಜನೆ

ಹೊಸಪೇಟೆ: ಭಾರತ ೭೬ನೇ ಸ್ವಾತಂತ್ರೊö್ಯÃತ್ಸವದ ಅಂಗವಾಗಿ ನಾಡಿನ ನಂ.೧ ಕನ್ನಡ ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿ ವಾಹಿನಿ ಸಹಯೋಗದಲ್ಲಿ ನಗರದ ವಿಜಯನಗರ ಪದವಿ ಕಾಲೇಜಿನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪದಬಂಧ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಜಿಲ್ಲೆಯ ವಿವಿಧ ಪದವಿ, ಪದವಿ ಪೂರ್ವ ಕಾಲೇಜಿನ ೭೦ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು, ಆ ಪೈಕಿ ಅತಿ ಕಡಿಮೆ ಅವಧಿಯಲ್ಲಿ ಉತ್ತರಿಸಿ , ವಿಜೇತರಾದ ಚನ್ನಬಸವ ಪಾಟೀಲ, ಗಾಯಿತ್ರಿ, ಡಿ.ಎಚ್.ಎಂ.ಸAಧ್ಯಾ, ಪೂಜಾ, ಕಾವ್ಯಗೆ ತಲಾ ಒಂದು ಸಾವಿರ ರೂ. ನಗದು ಸಹಿತ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

ನಗರಸಭೆ ಉಪಾಧ್ಯಕ್ಷ ಎನ್.ರೂಪೇಶ್ ಕುಮಾರ್, ವಿಎನ್‌ಸಿ ಕಾಲೇಜಿನ ಅಧ್ಯಕ್ಷ ಅಸುಂಡಿ ನಾಗರಾಜ ಗೌಡ, ವಿಎನ್‌ಸಿ ಕಾಲೇಜಿನ ಪದವಿ ಕಾಲೇಜಿನ ಪ್ರಾಚಾರ್ಯ ಪ್ರಭಯ್ಯ ವಿ.ಎಸ್., ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ, ಥಿಯೋಸಾಫಿಕಲ್ ಕಾಲೇಜಿನ ಗ್ರಂಥಪಾಲಕಿ ಸುಜಾತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net