ಸಾರಿಗೆ ಅದಾಲತ್‌ಗೆ ಉತ್ತಮ ಸ್ಪಂದನೆ

29Athani10
Published on

ಅಥಣಿ: ಸಾರಿಗೆ ಇಲಾಖೆ ಸೇವೆಗಳಲ್ಲಿರುವ ಸಮಸ್ಯೆ ಹಾಗೂ ಕುಂದು ಕೊರತೆ ಪರಿಹರಿಸುವ ಉದ್ದೇಶದಿಂದ ಸಾರಿಗೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಾರಿಗೆ ಅದಾಲತ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ತಮ್ಮ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ ಎಂದು ಹಿರಿಯ ಸಾರಿಗೆ ನಿರೀಕ್ಷಕ ಶಿವಾನಂದ ಗುಡೋಡಗಿ ಹೇಳಿದರು.

ಅಥಣಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾರಿಗೆ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರಲ್ಲಿ ಉಂಟಾಗಿರುವ ತಾಂತ್ರಿಕ, ಇತರೆ ಸಮಸ್ಯೆ ಪರಿಹರಿಸಲಾಗುತ್ತಿದೆ. ಸಾರಿಗೆ ಅದಾಲತ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದು ಹೇಳಿದರು.

ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ಶ್ರೀರಂಗ ಜೋಶಿ ಮಾತನಾಡಿ, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಅದಾಲತ್‌ನಲ್ಲಿ ಮಂಡಿಸಿದಲ್ಲಿ ಅಧಿಕಾರಿಗಳು ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳುವರು ಎಂದು ತಿಳಿಸಿದರು. ಹಲವಾರು ಜನರ ಸಮಸ್ಯೆ ಆಲಿಸಿ ಪರಿಹರಿಸಲಾಯಿತು. ಸುನೀತಕುಮಾರ ಉಮಾರಾಣಿ, ಸುಭಾಸ ಬುರ್ಲಿ, ಮುರಿಗೆಪ್ಪ ಮೋಟಗಿ, ಸತೀಶ ಹಾಗೂ ಸಿದ್ದು ಹಂಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net