

ಬೆಂಗಳೂರು: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಅರಂಭಿಸಿದ ಆನ್‌ಲೈನ್ ಮಾದರಿ ಪ್ರಶ್ನೆ ಪತ್ರಿಕೆ ಪ್ರಯೋಗಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಈ ಬಾರಿ ಪರೀಕ್ಷೆ ಎದುರಿಸಲಿರುವ 13,252 ವಿದ್ಯಾರ್ಥಿಗಳ ಪೈಕಿ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಪ್ರಯೋಗಕ್ಕೆ ಸ್ಪಂದಿಸಿದ್ದಾರೆ. ಜೂ.5ರಂದು ಪ್ರಾಯೋಗಿಕವಾಗಿ ಆರಂಭಿಸಿ ಜೂ.8ರಿಂದ ಅಧಿಕೃತವಾಗಿ ಆರಂಭಗೊಂಡ ತರಗತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಸರಾಸರಿ ಲಿತಾಂಶ ಶೇ.90ರಷ್ಟಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜೂ.24ರವರೆಗೆ ನಿರಂತರವಾಗಿ ನಡೆಯಲಿದ್ದು, ಶೇ.100 ಸಾಧಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಮನೆಗೆ ತಲುಪಲಿದೆ ಪ್ರಿಂಟ್‌ಔಟ್: ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಹಾಗೂ ಕೆಲವು ವಿದ್ಯಾರ್ಥಿ ಮನೆಗಳಲ್ಲಿನ ಆರ್ಥಿಕ ಸಮಸ್ಯೆಗಳಿಂದಾಗಿ ಎಲ್ಲರೂ ಆನ್‌ಲೈನ್ ಪರೀಕ್ಷೆ ಎದುರಿಸಲು ಸಾಧ್ಯವಾಗಿಲ್ಲ. ಅಂಥ ವಿದ್ಯಾರ್ಥಿಗಳ ಮನೆಗೆ ಸಿದ್ಧಪಡಿಸಿರುವ ಮಾದರಿ ಪ್ರಶ್ನೆಪತ್ರಿಕೆ ತಲುಪಿಸುವ ಕೆಲಸಕ್ಕೆ ಇಲಾಖೆ ಮುಂದಾಗಿದೆ. ಆಯಾ ಶಾಲಾ ವ್ಯಾಪ್ತಿಯ ಶಿಕ್ಷಕರು ಇದರ ಜವಾಬ್ದಾರಿ ವಹಿಸಿಕೊಂಡಿದ್ದು, ವಿದ್ಯಾರ್ಥಿ ಪಾಲಕರ ಮೂಲಕ ಪ್ರಿಂಟ್‌ಔಟ್ ತಲುಪಿಸುವ ಕಾರ್ಯ ನಡೆಯುತ್ತಿದೆ.
ದೂರದರ್ಶನ ಕಾರ್ಯಕ್ರಮ: ಈಗಾಗಲೇ ಡಿಡಿ ಚಂದನದಲ್ಲಿ ಪ್ರಸಾರವಾಗುತ್ತಿರುವ ವಿಶೇಷ ಕಾರ್ಯಕ್ರಮದಲ್ಲಿ ಗ್ರಾಮಾಂತರ ಜಿಲ್ಲೆಯ ಹಲವು ಶಿಕ್ಷಕರು ಭಾಗವಹಿಸಿದ್ದಾರೆ. ಅಲ್ಲಿ ಪ್ರಸ್ತಾಪವಾದ ವಿಷಯಗಳ ಬಗ್ಗೆ ಮಾದರಿ ಪ್ರಶ್ನೆಪತ್ರಿಕೆಗಳಲ್ಲಿ ಆಯ್ಕೆ ಮಾದರಿ ಪ್ರಶ್ನೆ ಕೇಳಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗಿದೆ ಎಂದಿದ್ದಾರೆ.
ಓಪನ್‌ಬುಕ್ ಸಿಸ್ಟಂ: ಅನ್‌ಲೈನ್ ಮೂಲಕ ನಡೆಸುವ ಮಾದರಿ ಪ್ರಶ್ನೆಪತ್ರಿಕೆಗಳನ್ನು ಓಪನ್‌ಬುಕ್ ಮಾದರಿಯಲ್ಲಿ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ತಲುಪಿಸುವ ಚಿಂತನೆ ನಡೆಸಲಾಗಿದೆ. ಇದಕ್ಕೆ ಪಾಲಕರಿಂದಲೂ ಸ್ಪಂದನೆ ವ್ಯಕ್ತವಾಗಿದೆ. ಬೆಳಗ್ಗೆ 7ರಿಂದ ಸಂಜೆ 7ಗಂಟೆವರೆಗೆ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಲು ಅವಕಾಶವಿದೆ. ಆಯ್ಕೆ ಪ್ರಶ್ನೆಗಳನ್ನು ಗುರುತಿಸಿ ಆಪ್ಷನ್ ಇರುವ ಭಾಗದಲ್ಲಿ ಸೆಂಟ್ ಬಟನ್ ಒತ್ತಿದರೆ ಸರಿ ಹಾಗೂ ತಪ್ಪು ಉತ್ತರಗಳು ಆನ್‌ಲೈನ್‌ನಲ್ಲೇ ತಿಳಿಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ತಿಳಿಸಿದ್ದಾರೆ.
ಸ್ನೇಹಪೂರ್ವಕ ವಾತಾವರಣ: ಇದೊಂದು ಪ್ರಯೋಗವಷ್ಟೆ, ಲಾಕ್‌ಡೌನ್ ೋಷಣೆಗೂ ಮೊದಲು ಎಲ್ಲ ಪಠ್ಯ ಚಟುವಟಿಕೆಗಳು ಮುಗಿದಿವೆ. ಆದರೆ ರಿವಿಜನ್ ನಡೆಸಲು ಸಾಧ್ಯವಾಗಲಿಲ್ಲ. ಪರೀಕ್ಷೆ ದಿನಾಂಕ ನಿಗದಿಯಾಗಿರುವುದರಿಂದ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಪ್ರಶ್ನೆಪತ್ರಿಕೆ ಪ್ರಯೋಗ ನಡೆಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಆನ್‌ಲೈನ್ ಮಾದರಿ ಪ್ರಶ್ನೆಪತ್ರಿಕೆ ಪ್ರಯೋಗಕ್ಕೆ ವಿದ್ಯಾರ್ಥಿ ಹಾಗೂ ಪಾಲಕರಿಂದಲೂ ಸ್ಪಂದನೆ ವ್ಯಕ್ತವಾಗಿದೆ. ಆಯಾ ಶಾಲೆ ಮುಖ್ಯ ಶಿಕ್ಷಕರು ಹಾಗೂ ವಿಷಯವಾರು ಶಿಕ್ಷಕರು ಜವಾಬ್ದಾರಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಎಂ.ಎಚ್. ಗಂಗಮಾರೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಇದೊಂದು ಸರಳವಾದ ಪರೀಕ್ಷಾ ವಿಧಾನ. ಈಗಾಗಲೇ ವಿದ್ಯಾರ್ಥಿಗಳು ಕಲಿತ ಪಠ್ಯವಿಷಯಗಳನ್ನು ಮರು ಮನನ ಮಾಡಿಸುವ ಪ್ರಯೋಗವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಮೂಡುತ್ತದೆ. ಕನ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಹೊಸಕೋಟೆ